ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಂತ ನಿಧಿ ಶೇ.5 ಯೋಜನೆಯಡಿ ವಿಶೇಷ ಚೇತನ ವಿದ್ಯಾರ್ಥಿ, ಪ್ರಸ್ತುತ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿರುವ ಸರ್ವೆ ಗ್ರಾಮದ ಸರ್ವೆದೋಳ ನಿವಾಸಿ ರಕ್ಷಿತ್ ಅವರಿಗೆ ವಿದ್ಯುತ್ ಚಾಲಿತ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲಾಯಿತು. ರಕ್ಷಿತ್ ಅವರ ತಂದೆ ಅಶೋಕ್ ಎಸ್.ಡಿ ಗಾಲಿ ಕುರ್ಚಿಯನ್ನು ಸ್ವೀಕರಿಸಿದರು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಹಾಗೂ ಸದಸ್ಯರು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.