ಪೆರ್ನಾಜೆ: ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಲ್ಲಿ 595 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಸಂಜನಾ ಎಸ್ ಗಣೇಶ್ ಅವರನ್ನು ವಿಜಯನಗರ ವಲಯದ ವತಿಯಿಂದ ಅ .12 ರಂದು ಗಿರಿನಗರದ ರಾಮಾಶ್ರಮದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಸಂಸ್ಥಾನದಿಂದ ಗೌರವಿಸಲಾಯಿತು.
ಸಂಜನಾ ಎಸ್ ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (kins)ನಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಂಜನಾ ಎಸ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಕೆರೆ ನೂಜಿಯ ಸದಾಶಿವ ಭಟ್ ಮತ್ತು ಸರೋಜಿನಿ ದಂಪತಿಗಳ ಪುತ್ರಿ ಡಾ .ವಿದ್ಯಾ ಸರಸ್ವತಿ ಪಿ ಎಸ್ ಮತ್ತು ಗಣೇಶ್ ರಾಮಚಂದ್ರ ದಂಪತಿಯ ಪುತ್ರಿಯಾಗಿದ್ದು,ಪ್ರಸ್ತುತ ಬೆಂಗಳೂರು ನಿವಾಸಿ.