ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ರವರ ನೇತೃತ್ವದಲ್ಲಿ ರೈ ಎಸ್ಟೇಟ್ & ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅ.20ರಂದು ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 75,000ರಿಂದ 1,00000 ಜನ ಸೇರುವ ನಿರೀಕ್ಷೆ ಇದ್ದು, ಸದ್ರಿ ಸಮಯ ಪುತ್ತೂರು ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 6.00ಗಂಟೆಯವರೆಗೆ ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ರಸ್ತೆ ಬದಲಾವಣೆ ಈ ಕೆಳಗಿನಂತಿದೆ:
- ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಬಸ್ ಗಳು ದರ್ಬೆ ಮುಖಾಂತರ ಅಶ್ವಿನಿ ವೃತ್ತದ ಕಡೆಗೆ ಸಂಚರಿಸುವುದು.
- ಮಂಗಳೂರು ಕಡೆಯಿಂದ ಪುತ್ತೂರು ಪೇಟೆಗೆ ಬರುವ ಎಲ್ಲಾ ಘನ ಮತ್ತು ಲಘು ವಾಹನಗಳು ಲಿನೇಟ್ಜಂಕ್ಷನ್ ನಿಂದ ಬೊಳುವಾರು ಮಾರ್ಗವಾಗಿ ಪಡೀಲು, ಕೋಟೇಚಾ ಮಾರ್ಗವಾಗಿ ಸಂಚರಿಸುವುದು.
- ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ನಗರದಿಂದ ಬನ್ನೂರು ಮಾರ್ಗವಾಗಿ ಪಡೀಲಿಗೆ ಬಂದು ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುವುದು.
- ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಪೇಟೆಗೆ ಬರುವ ಎಲ್ಲಾ ವಾಹನಗಳು ಕೋಟೇಚಾ ಕ್ರಾಸ್-ಎಪಿಎಂಸಿ ಮಾರ್ಗವಾಗಿ ಸಂಚರಿಸುವುದು. ಅದೇ ರೀತಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಡೀಲು ಬನ್ನೂರು ಮಾರ್ಗವಾಗಿ ನಗರ ಕಡೆಗೆ ಸಂಚರಿಸುವುದು.
- ಮಯೂರ ಜಂಕ್ಷನ್ನಿಂದ ಕೊಂಬೆಟ್ಟು ಮಾರ್ಗವಾಗಿ ಬೊಳುವಾರು ಕಡೆಗೆ ಹಾದು ಹೋಗುವ ರಸ್ತೆಯನ್ನು ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ಮಯೂರ ಜಂಕ್ಷನ್ನಿಂದ ಬೊಳುವಾರು ಆಂಜನೇಯ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ಮುಖ್ಯ ರಸ್ತೆಯಿಂದ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆಯನ್ನಾಗಿ ತಾತ್ಕಾಲಿಕ ಬದಲಾವಣೆ ಮಾಡಿ ಆದೇಶಿಸಲಾಗಿದೆ.