ಪುಣಚ: ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಯಾನೆಪೋಯ ಆಯುರ್ವೇದ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಹಾಗೂ ಸ್ವಸ್ತ ನಾರಿ- ಸಶಕ್ತ ಪರಿವಾರ್ ಕಾರ್ಯಕ್ರಮ ಪುಣಚ ಮೂಡಂಬೈಲು ವೈಭವಿ ಕಲಾ ಸಭಾಂಗಣದಲ್ಲಿ ಅ.17ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಪಟಿಕಲ್ಲು ಪೋಷಣ್ ಮಾಸಾಚರಣೆಯಿಂದ ಬಹಳಷ್ಟು ಮಾಹಿತಿ ನಮ್ಮ ಮಹಿಳೆಯರಿಗೆ ಸಿಕ್ಕಿದೆ. ಈ ಮಾಹಿತಿ ಪಡೆದುಕೊಂಡ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಇಲ್ಲಿ ಕಾರ್ಯಕ್ರಮ ಆಯೋಜಿಸಿದ ಇಲಾಖೆಗಳಿಗೆ ಅಭಿನಂದನೆಗಳು ಎಂದು ಶುಭ ಹಾರೈಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಎಚ್ ಐ ಕಾರ್ಯಕ್ರಮದ ಪ್ರಸ್ತಾವನೆಗೈದರು. ಅಂಚೆ ಇಲಾಖಾ ಸಂಪನ್ಮೂಲ ವ್ಯಕ್ತಿ ಗುರುಪ್ರಸಾದ್ ಅಂಚೆ ವಿಮೆ ಹಾಗೂ ಉಳಿತಾಯ ಯೋಜನೆ ಅಂಚೆ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ, ಗರ್ಭಿಣಿಯರಿಗೆ ಸ್ನೇಹ ಸಿಂಚನವೆಂಬ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ ಮತ್ತು ಸ್ಪರ್ಧೆ ಹಾಗೂ ಅದೃಷ್ಟದ ಆಟ ಆಡಿಸಿ ಬಹುಮಾನ ವಿತರಿಸಲಾಯಿತು.
ಯೇನೆಪೋಯ ಆಯುರ್ವೇದ ಆಸ್ಪತ್ರೆ ನರಿಂಗಾನ ಇಲ್ಲಿನ ವೈದ್ಯಾಧಿಕಾರಿ ತಂಡದಿಂದ ಮಹಿಳೆಯರ ಮಕ್ಕಳ ಹಾಗೂ ಸೇರಿದ ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕ ಔಷಧಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಸದಸ್ಯ ಅಶೋಕ್, ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಅಧಿಕಾರಿ ರೋಹಿತ್, ಮಹಿಷಮರ್ದಿನಿ ಯುವಕ ಮಂಡಲದ ಅಧ್ಯಕ್ಷ ರವಿಚಂದ್ರ, ಮಹಿಳಾ ಮಂಡಲ ಅಧ್ಯಕ್ಷೆ ಸತ್ಯ ಪಿ.ಶೆಟ್ಟಿ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಗಿರಿಜಾ ಸಿ.ಎಚ್, ಓ.ಪ್ರೀತಿಕ, ಆರೋಗ್ಯ ಸುರಕ್ಷಾಧಿಕಾರಿ ಮಮತಾ, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ಅನುಷ್ಯ, ಸ್ತ್ರೀಶಕ್ತಿ ಸದಸ್ಯರು ಮಕ್ಕಳ ಪೋಷಕರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾಕಾರ್ಯಕರ್ತೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪೋಷಣ್ ಸಂಯೋಜಕಿ ವಿನಿತಾ ಪೈ ವಂದಿಸಿದರು.