ಪಟ್ಟೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಬಯಲಾಟ ಸಮಿತಿ ರಚನೆ

0

ಅಧ್ಯಕ್ಷರಾಗಿ ಅಚ್ಯುತ ಭಟ್ ಪಾದೆಕರ್ಯ,  ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ರೈ ಅರೆಪ್ಪಾಡಿ 

ಬಡಗನ್ನೂರು : ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವಠಾರದಲ್ಲಿ 1996, 97 ಮತ್ತು 98 ನೇ ಇಸವಿಯಲ್ಲಿ ಸತತ ಮೂರು ವರ್ಷಗಳ ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿಯ ಸೇವಾ ಬಯಲಾಟವನ್ನು ಊರ  ಹತ್ತು ಸಮಸ್ತರ ವತಿಯಿಂದ ಆಡಿಸಿಕೊಂಡು ಬರುತ್ತಿದ್ದು ತದನಂತರ ಮುಂದುವರಿಸಲು ಅಸಾಧ್ಯವಾದ ಕಾರಣ ಈ  ಪ್ರದೇಶದಲ್ಲಿ ಭಾದಾ ದೋಷಗಳು ಬರುತ್ತಿದೆ ಎಂದು ಪ್ರಶ್ನಾಚಿಂತನೆ ಕಂಡುಬಂದಿದ್ದು  ಈ ನಿಟ್ಟಿನಲ್ಲಿ  ಸೇವೆಯಾಟವನ್ನು ಪುನಃ ಪ್ರಾರಂಭಿಸುವ ಪ್ರಯುಕ್ತ ಊರಿನ ಸಮಸ್ತರ ಸಭೆ ಕರೆದು ತೀರ್ಮಾನಿಸಿ ಸಮಿತಿ ರಚನೆ ಮಾಡಲಾಯಿತು.

ಸಮಿತಿ ರಚನೆ  
ಅಧ್ಯಕ್ಷರಾಗಿ ಅಚ್ಯುತ ಭಟ್ ಪಾದೆಕರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ರೈ ಅರೆಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ, ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ  ಗೋಪಾಲಕೃಷ್ಣ ಭಟ್ ದ್ವಾರಕ, ಹಾಗೂ  ನಾರಾಯಣ ಭಟ್ ಬೀರ್ನೋಡಿ ಇವರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಉಪಾಧ್ಯಕ್ಷರಾಗಿ ರಾಜಗೋಪಾಲ ಭಟ್ ಪಟ್ಟೆ, ರಘುರಾಮ ಪಾಟಾಳಿ ಶರವು, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಉಳಯ, ಶಶಿಧರ ಪಟ್ಟೆ, ಕೋಶಾಧಿಕಾರಿ ಸುಬ್ಬಪ್ಪ ಪಾಟಾಳಿ ಪಟ್ಟೆ ಸಂಘಟನಾ ಕಾರ್ಯದರ್ಶಿಯಾಗಿ ಲಿಂಗಪ್ಪ ಗೌಡ ಮೋಡಿಕೆ, ಇವರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಅಶಿತ್ ರೈ( ಪೇರಾಲು ) ಕುದುರೆಮಜಲು, ನಾರಾಯಣ ಗೌಡ ಉಳಯ, ಸುಬ್ರಹ್ಮಣ್ಯ ಭಟ್ ಪಟ್ಟೆ, ಶ್ರೀನಿವಾಸ ಭಟ್ ಚಂದುಕೂಡ್ಲು ರಾಧಾಕೃಷ್ಣ ರೈ ಅರೆಪ್ಪಾಡಿ, ಡಾ| ಹರಿಪ್ರಸಾದ್ ರೈ ಪಟ್ಟೆ ನಾರಾಯಣ ಪಾಟಾಳಿ ಪಟ್ಟೆ, ಜಯರಾಮ ಪಾಟಾಳಿ ಪಟ್ಟೆ,ಹಾಗೂ ಶಂಕರಿ ನಾರಾಯಣ ಪಾಟಾಳಿ ಪಟ್ಟೆ ಹಾಗೂ ರಾಮಚಂದ್ರಪ್ಪ ಪಟ್ಟೆ ಇವರುಗಳನ್ನು ಆಯ್ಕೆ ಮಾಡಲಾಯಿತು. 

LEAVE A REPLY

Please enter your comment!
Please enter your name here