ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ಶ್ರೀ ಲಕ್ಷ್ಮೀಪೂಜೆ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿನ್ನ, ಬೆಳ್ಳಿ ಆಭರಣಗಳ ತಯಾರಕ ಸಂಸ್ಥೆ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಯಶಸ್ವಿ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅ.22ರಂದು ವರ್ಕ್ಸ್ ಶಾಫ್‌ನಲ್ಲಿ ಶ್ರೀ ಗಣಪತಿ ಹೋಮ ಮತ್ತು ಶ್ರೀ ಲಕ್ಷ್ಮೀಪೂಜೆ ಜರಗಿತು. ಪುರೋಹಿತ ನವೀನ್ ಶರ್ಮ ಬೆಳ್ಳಾರೆರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಶ್ರೀ ಶಕ್ತಿ ಜನರಲ್ ಸ್ಟೋರ್‌ನ ಸೂರಜ್ ಭಟ್, ವಾಸುದೇವ ಆಚಾರ್ಯ ಬಾಂಬೆ, ಹೃತಿಕ್ ಬಾಂಬೆ, ಶ್ರೀ ಕೃಷ್ಣ ಜ್ಯುವೆಲ್ಲರಿ ವರ್ಕ್ಸ್‌ನ ಪದ್ಮನಾಭ ಆಚಾರ್ಯ, ಗೋಪಾಲಕೃಷ್ಣ ರೈ ಬಂಟುಮೂಲೆ, ಸೀತಾರಾಮ ಆಚಾರ್ಯ ಕಾಣಿಯೂರು, ರೂಪಾ, ತನುಷ್, ತೃಷಾ, ಪದ್ಮನಾಭ ಆಚಾರ್ಯ ಕೆದ್ದಳಿಕೆ, ಜಯರಾಮ ಆಚಾರ್ಯ ಕುಂಬ್ರ,ಪವನ್, ಗೋಪಿನಾಥ ಆರ್ಟ್ಸ್ ಕೃಷ್ಣನಗರ, ಗಣೇಶ ಆಚಾರ್ಯ ನಿಡ್ಪಳ್ಳಿ, ರವಿ ಆಚಾರ್ಯ ಕೃಷ್ಣನಗರ, ಸುಲೋಚನ, ಶ್ರೇಯಾ, ಆರಾಧ್ಯ ಸೇರಿದಂತೆ ಹಲವು ಮಂದಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನ ಮಾಲಕ ಉದಯ ಆಚಾರ್ಯ ಕೃಷ್ಣನಗರ ಅತಿಥಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು. ಶುಭಾ ಉದಯ ಆಚಾರ್ಯ, ಹಿತಾಶ್ರೀ, ಹಿತೇಶ್ ಸಹಕರಿಸಿದ್ದರು.


24ನೇ ವರ್ಷಕ್ಕೆ ಪಾದಾರ್ಪಣೆ

ಕುಂಬ್ರದ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಸಂದರ್ಭದಲ್ಲಿ ಗ್ರಾಹಕ ಬಂಧುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವ ಮೂಲಕ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ದೈವ ದೇವರುಗಳ ಆಭರಣಗಳನನು ತಯಾರಿಸಿ ಕೊಡುವ ವ್ಯವಸ್ಥೆ ಹಾಗೇ ಗ್ರಾಹಕರ ಮನದಿಚ್ಚೆಯಂತೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸಲಾಗುತ್ತದೆ ಮತ್ತು ಬೆಳ್ಳಿ ಆಭರಣಗಳಿಗೆ ಚಿನ್ನದ ಒಪ್ಪ ಹಾಕಿ ಕೊಡುವ ವ್ಯವಸ್ಥೆಯು ಇದೆ. ಗ್ರಾಹಕರು ಪ್ರೋತ್ಸಾಹ ನೀಡುವಂತೆ ಮಾಲಕ ಉದಯ ಆಚಾರ್ಯ ಕೃಷ್ಣನಗರ ತಿಳಿಸಿ, ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here