ಪುತ್ತೂರು: ಉಪ್ಪಿನಂಗಡಿಗೆ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವ, ಕಾರ್ತಿಕ ಮಹಾಪೂಜೆ , ಬಲೀಂದ್ರ ಪೂಜೆ ಪೂಜೆ ಮತ್ತು ಶ್ರೀ ತುಳಸಿ ಪೂಜೆಯನ್ನು ದೇವಳದ ಅರ್ಚಕರಾದ ಗುರುಪ್ರಸಾದ ನೂರಿತ್ತಾಯ ನೆರವೇರಿಸಿದರು. ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷರಾದ ಭಾಸ್ಕರ ಬಾರ್ಯ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ದೇವಳದ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಸೇವಾ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ ಬಾರ್ಯ, ಟ್ರಸ್ಟಿಗಳಾದ ಪ್ರವೀಣ್ ಮೂರುಗೋಳಿ, ವಿಜಯಲಕ್ಷ್ಮಿ ರೈ ಬಾರ್ಯ, ಶ್ರೀವಾರಿಣಿ ಗುರುಪ್ರಸಾದ್, ಸುಧಾಕರ ಸಾಂತೇಲಿ ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.