ಸಾಂಸ್ಕೃತಿ ಕಾರ್ಯಕ್ರಮಕ್ಕೂ ಗೋ ಪೂಜೆಗೂ ಅವಿನಾಭಾವ ಸಂಬಂಧ – ಗೋಪಾಲಕೃಷ್ಣ ಭಟ್
ಪುತ್ತೂರು: ದ್ವಾರಕ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದೇರ್ಲ ಸುರಭಿ ಗೋ ಶಾಲೆಯಲ್ಲಿ ಪ್ರತಿ ವರ್ಷನಡೆಯುವ ದೀಪಾವಳಿ ಗೋ ಪೂಜೆಯ ಜೊತೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಕಲಾ ಶಾಲೆಯ ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ಸುರಭಿ ಕಲಾವಲ್ಲರೀ ಎಂಬ ಭರತನಾಟ್ಯ ಪ್ರದರ್ಶನ ನಡೆಯಿತು.

ಸುರಭಿ ಗೋ ಶಾಲೆಯ ಮುಂದೆ ದೀಪ ಪ್ರಜ್ವಲಿಸಿದ ದ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಪ್ರತಿ ವರ್ಷ ಸುರಭಿ ಗೋ ಶಾಲೆಯಲ್ಲಿ ಗೋಪೂಜೆ ಮಾಡುತ್ತೇವೆ. ಸಾಂಸ್ಕೃತಿ ಕಾರ್ಯಕ್ರಮಕ್ಕೂ ಗೋ ಪೂಜೆಗೂ ಅವಿನಾಭಾವ ಸಂಬಂಧವಿದೆ.
ಈ ನಿಟ್ಟಿನಲ್ಲಿ ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಸ್ವಾಗತಿಸಿದರು. ದ್ವಾರಕ ಪ್ರತಿಷ್ಠಾನದ ಮಾರ್ಗದರ್ಶಕ ಗಣರಾಜ್ ಕುಂಬ್ಳೆ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಸಂಚಾಲಕಿ ಶಶಿಪ್ರಭಾ, ನೃತ್ಯ ನಿರ್ದೇಶಕರಾದ ವಿದ್ವಾನ್ ಬಿ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಬಿ ಗಿರೀಶ್ ಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಅವನೀಶಕೃಷ್ಣ , ಆದಿತ್ಯಕೃಷ್ಣ ಪ್ರಾರ್ಥಿಸಿದರು. ಗೋಪೂಜೆಯ ಆರಂಭದಲ್ಲಿ ಸುರಭಿ ಕಲಾವಲ್ಲರೀ ನಡೆಯಿತು. ಬಳಿಕ ಸುರಭಿ ಗೋ ಶಾಲೆಯಲ್ಲಿರುವ 20 ದೇಶಿ ಗೋವುಗಳಿಗೆ ಆರತಿ ಬೆಳಗಿ ಗೋಪೂಜೆ ನಡೆಯಿತು. ಭರತನಾಟ್ಯ ಕಲಾವಿದರಿಗೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಶಶಿಪ್ರಭಾ, ವಿದ್ವಾನ್ ಗಿರೀಶ್, ಹಿರಿಯ ವಿದ್ಯಾರ್ಥಿ ವಿದುಷಿ ಸುಮಂಗಲ, ಪ್ರಣಮ್ಯ, ವಿಷ್ಣುಪ್ರಿಯ ಮುಖವರ್ಣಿಕೆ ಮಾಡಿದರು.