ಕಲ್ಪಣೆ-ರೆಂಜಲಾಡಿ-ಭಕ್ತಕೋಡಿ ರಸ್ತೆ ಬದಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ತೆರವುಗೊಳಿಸಿದ ಸಂತೋಷ್ ಕಲ್ಪಣೆ ಮತ್ತು ತಂಡ

0

ಪುತ್ತೂರು: ಭಕ್ತಕೋಡಿ-ರೆಂಜಲಾಡಿ-ಕಲ್ಪಣೆ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗಾತ್ರದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ಸಂತೋಷ್ ಕಲ್ಪಣೆ ಮತ್ತು ತಂಡದವರು ಶ್ರಮದಾನದ ಮೂಲಕ ತೆರವುಗೊಳಿಸಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ಹುಲ್ಲುಗಳು ಬೃಹತ್ ಗಾತ್ರದಲ್ಲಿ ಬೆಳೆದಿದ್ದ ಪರಿಣಾಮ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಮತ್ತು ವಾಹನಗಳಿಗೆ ಸೈಡ್ ಕೊಡಲು ಸ್ಥಳಾವಕಾಶ ಇಲ್ಲದಾಗಿತ್ತು, ಇದನ್ನು ಗಮನಿಸಿದ ಸಂತೋಷ್ ಕಲ್ಪಣೆ ಅವರು ತಮ್ಮ ತಂಡದ ಇತರ ಆರು ಜನರನ್ನು ಸೇರಿಸಿಕೊಂಡು ಕಲ್ಪಣೆಯಿಂದ-ಭಕ್ತಕೋಡಿ ವರೆಗೆ ಮೆಷಿನ್ ಮೂಲಕ ಹುಲ್ಲು, ಪೊದೆ, ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. ರಾಧಾಕೃಷ್ಣ ರೈ ರೆಂಜಲಾಡಿ ಅವರು ಸಂತೋಷ್ ಮತ್ತು ತಂಡವನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here