ಅಧ್ಯಕ್ಷರಾಗಿ ಸತೀಶ್ ಅನ್ಯಾಡಿ, ಕಾರ್ಯದರ್ಶಿಯಾಗಿ ಮುನೀರಾ
ಕಾಣಿಯೂರು : ಕುದ್ಮಾರು ಗ್ರಾಮ ಕೂರ ಅಂಗನವಾಡಿ ಕೇಂದ್ರದ ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಉದ್ಯಮಿ ಸತೀಶ್ ಅನ್ಯಾಡಿ ಹಾಗೂ ಕಾರ್ಯದರ್ಶಿಯಾಗಿ ನ್ಯಾಯವಾದಿ ಮುನೀರಾ ಅವರು ಆಯ್ಕೆಯಾದರು.
ಇತ್ತೀಚೆಗೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವ ಸಲಹೆಗಾರರಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿ, ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಯಶೋಧರ್ ಕೆಡೆಂಜಿಕಟ್ಟ, ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಲಚಂದ್ರ ನೂಜಿ, ಚೇತನ್ ಹೊಸೋಕ್ಲು ಸೇರಿದಂತೆ 20 ಮಂದಿಯನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ವಸಂತಿ ನೂಜಿ ಸಭೆ ನಿರ್ವಹಿಸಿದರು.