ನೆಲ್ಯಾಡಿ: ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಪಾಲಕರ ಸಭೆ, ಶಾಲಾ ಅಭಿವೃದ್ಧಿಯ ಲಕ್ಕಿ ಕೂಪನ್ ಡ್ರಾ ಹಾಗೂ ಶಾಲೆಗೆ ನೂತನವಾಗಿ ಅಳವಡಿಸಿದ ಸೋಲಾರ್ ಸಿಸ್ಟಮ್‌ನ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಸಂಸ್ಢೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಪ್ರಸ್ತಾವಿಕವಾಗಿ ಮಾತನಾಡಿ, ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯ ವಾರ್ಷಿಕೊತ್ಸವ ಜಂಟಿಯಾಗಿ ನಡೆಸಲಾಗುವುದು ಎಂದು ತಿಳಿಸಿ, ಪೋಷಕರಿಗೆ ಹಲವು ಸಲಹೆ ಸೂಚನೆ ನೀಡಿ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಹೊನ್ನಾವರ ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿಯ ಜನರಲ್ ಸೆಕ್ರೆಟರಿ ರೆ.ಫಾ ಸನ್ನಿ ಜಾನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ ಬೆಳೆಸಿ ಎಂದು ಹೇಳಿದರು.
ಹೊನ್ನಾವರ ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಾದ ಕಮಾಂಡರ್ ಇ.ಪಿ. ಐಸಾಕ್, ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್, ಮುಖ್ಯ ಶಿಕ್ಷಕ ಸಿಬಿಚ್ಚನ್ ಟಿ.ಸಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಗೌಡ ಪುತ್ತಿಲ, ಉಪಾಧ್ಯಕ್ಷೆ ಪಿಂಕಿ ಸಾಜು, ಜಾನ್ ಕೆ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಯೋಜಕರಾದ ಯಶೋಧರ ಕೆ.ಕಾರ್ಯಕ್ರಮ ನಿರೂಪಿಸಿದರು.
