ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಬ್ಬರಿಗೆ ಸೀಮಂತ ಕಾರ್ಯ

0

ಸಂಭ್ರಮಕ್ಕೆ ಸಾಕ್ಷಿಯಾದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌

ಪುತ್ತೂರು : ತಾಯ್ತನ ಹೆಣ್ಣಿಗೊಲಿದ ಅದೃಷ್ಟ… ಈ ಅದೃಷ್ಟವನ್ನು ಸಂಭ್ರಮಿಸುವುದೇ ಸೀಮಂತ ಕಾರ್ಯ.. ಮಹಿಳೆಯು ತಾಯ್ತನವನ್ನು ಸಂಭ್ರಮಿಸಿ, “ತಾಯಿ” ಎಂಬ ಉನ್ನತ ಪದವಿಗೇರುತ್ತಿರುವ ಸಲುವಾಗಿ ಶುಭಹಾರೈಸುವ ಗುರುತಾಗಿ ಸೀಮಂತ ಕಾರ್ಯ ನಡೆಸಲಾಗುತ್ತದೆ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಬ್ಬರು ತಾಯಿಯಾಗುವ ಹೊಸ್ತಿಲಲ್ಲಿದ್ದು, ಭಾರತೀಯ ಸಂಸ್ಕೃತಿಯ ಪ್ರಕಾರ ಸಮಾಜದಲ್ಲಿ ನಡೆಸಿಕೊಂಡು ಬರುತ್ತಿರುವಂತಹ ಸೀಮಂತ ಕಾರ್ಯವನ್ನು ನೆರವೇರಿಸಿ ಸಂಭ್ರಮಕ್ಕೆ ಸಾಕ್ಷಿಯಾಯಿತು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ.

ಅ.24ರಂದು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಗರ್ಭಿಣಿ ಮಹಿಳಾ ಉದ್ಯೋಗಿಗಳಿಗೆ ಸಾಂಪ್ರದಾಯಿಕ ಪದ್ಧತಿಯಂತೆ ಸೀಮಂತ ಕಾರ್ಯ ನೆರವೇರಿಸಿ, ಗರ್ಭಿಣಿ ಉದ್ಯೋಗಿಗಳಿಗೆ ಉಡುಗೊರೆ ನೀಡಲಾಯಿತು.

ಸಂಸ್ಥೆಯ ನಿರ್ದೇಶಕರಾದ ಬಲರಾಮ್ ಆಚಾರ್ಯ, ಲಕ್ಷ್ಮಿಕಾಂತ ಆಚಾರ್ಯ, ಸುಧನ್ವ ಬಿ ಆಚಾರ್ಯ ಮತ್ತು ವೇದ ಲಕ್ಷ್ಮಿಕಾಂತ ಆಚಾರ್ಯ ಮತ್ತು ಎಲ್ಲಾ ಸಿಬ್ಬಂದಿ, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗರ್ಭಿಣಿಯರನ್ನು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಲರಾಮ್ ಆಚಾರ್ಯ, ಮಹಿಳಾ ಉದ್ಯೋಗಿಗಳಾದ ಪ್ರತೀಕಾ ಮತ್ತು ಅಮೂಲ್ಯರಿಗೆ ಸುರಕ್ಷಿತ ಹೆರಿಗೆಯೊಂದಿಗೆ, ಆರೋಗ್ಯದಾಯಕ ಮಗುವನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಶುಭಾಶಯ ತಿಳಿಸಿದರು.

LEAVE A REPLY

Please enter your comment!
Please enter your name here