





ಪುತ್ತೂರು:ಹೃದಯಾಘಾತದಿಂದ ನಿಧನರಾಗಿರುವ ಬೆಂಗಳೂರು ತುಳುಕೂಟದ ಅಧ್ಯಕ್ಷ ಕುಕ್ಕುಂಜೋಡು ಸುಂದರರಾಜ್ ರೈಯವರ ಅಂತ್ಯಕ್ರಿಯೆ ಅ.24ರಂದು ಬೆಳಿಗ್ಗೆ ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ಸ್ವಗೃಹದಲ್ಲಿ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ,ರಾಜ್ಯ ಬಿಜೆಪಿ ಮುಖಂಡ ರಾಜ್ಗೋಪಾಲ್ ರೈ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಸಹಕಾರ ಭಾರತಿ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು,ಭೂನ್ಯಾಯ ಮಂಡಳಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ,ಶಿವರಾಮ ಆಳ್ವ ಬಳ್ಳಮಜಲು,ಸುರೇಂದ್ರ ರೈ ಬಳ್ಳಮಜಲು, ನಿವೃತ್ತ ರೈಲ್ವೇ ಉದ್ಯೋಗಿ ಚಂದ್ರಶೇಖರ್ ರೈ ನಡುಬೈಲು, ಉಮೇಶ್ ರೈ ನಡುಬೈಲು, ಮುಂಡೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮಾಜಿ ಗ್ರಾ.ಪಂ.ಸದಸ್ಯ ಇಬ್ರಾಹಿಂ ಮುಲಾರ್, ಕೆದಂಬಾಡಿ ಕೆಯ್ಯೂರು ಪ್ರಾ.ಕೃ.ಪ.ನಿರ್ದೇಶಕ ಪಡ್ಡಂಬೈಲು ಜನಾರ್ದನ ರೈ ಕೊಡಂಕೀರಿ, ನಿತೀಶ್ ಶಾಂತಿವನ, ಬೆಂಗಳೂರು ತುಳುಕೂಟದ ಗೌರವಾಧ್ಯಕ್ಷ ದಿನೇಶ್ ಹೆಗ್ಡೆ,ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಸಂತೋಷ್ ಕುಮಾರ್ ರೈ ಡಿಂಬ್ರಿ, ಚಂದ್ರಹಾಸ ರೈ ಕೊಡಂಕೀರಿ, ರಘುನಾಥ ಶೆಟ್ಟಿ ಪೊನೋಣಿ, ರಾಕೇಶ್ ರೈ ಬೋಳೋಡಿಗುತ್ತು, ಸದಾಶಿವ ಶೆಟ್ಟಿ ಪಟ್ಟೆ, ಸುಧೀರ್ ಶೆಟ್ಟಿ ‘ನೇಸರ’,ಭಾರತೀಯ ಕಿಸಾನ್ ಸಂಘದ ಜಿಲ್ಲಾ, ತಾಲೂಕು ಘಟಕದ ಪ್ರಮುಖರು,ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು,ಸಂಘಟನೆಗಳ ಪದಾಽಕಾರಿಗಳು, ಸದಸ್ಯರು,ಬೆಂಗಳೂರು ತುಳು ಕೂಟದ ಪದಾಧಿಕಾರಿಗಳು,ಕನ್ನಡ ರಕ್ಷಣಾ ವೇದಿಕೆಯ ಪ್ರಮುಖರು, ಆಲಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















