





ನೆಲ್ಯಾಡಿ: ಬಜತ್ತೂರಿಗೆ ಕೆಪಿಎಸ್ ಸ್ಕೂಲ್ ಮಂಜೂರುಗೊಳಿಸಲು ಕಾರಣರಾದ ಶಾಸಕ ಅಶೋಕ್ಕುಮಾರ್ ರೈಯವರನ್ನು ಅವರ ಮನೆಯಲ್ಲಿ ಬಜತ್ತೂರು ಗ್ರಾಮದ ವಿದ್ಯಾಭಿಮಾನಿಗಳು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.


ಬಜತ್ತೂರು ಶಾಲೆಯ ಎಸ್ಡಿಎಂಸಿ, ಶಿಕ್ಷಣ ಸಮನ್ವಯ ಟ್ರಸ್ಟ್ ಹಾಗೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು ಹಾಗೂ ಗ್ರಾಮದ ವಿದ್ಯಾಭಿಮಾನಿಗಳು ಭೇಟಿ ನೀಡಿ ಶಾಸಕ ಅಶೋಕ್ಕುಮಾರ್ ರೈಯವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಮುಂದಾಳು ಡಾ.ರಾಜರಾಮ್ ಕೆ.ಬಿ., ಯು.ಟಿ.ತೌಸೀಫ್ ಉಪ್ಪಿನಂಗಡಿ, ಶೇಖರ ಪೂಜಾರಿ ಶಿಬಾರ್ಲ, ವಿನೋದ ಗೌಡ ಬೆದ್ರೋಡಿ ಮತ್ತಿತರರು ಉಪಸ್ಥಿತರಿದ್ದರು.















