ಪುತ್ತೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನವೊಂದು ನಾಪತ್ತೆಯಾದ ಘಟನೆ ಅ.20 ರಂದು ನಡೆದಿದ್ದು ನಾಪತ್ತೆಯಾದ ದನ ಗುಡ್ಡದಲ್ಲಿ ಪತ್ತೆಯಾಗಿದೆ.
ಬಪ್ಪಳಿಗೆ ನಿವಾಸಿ ನೆಬಿಸಾ ಎಂಬವರು ಮನೆಯ ಕೊಟ್ಟಿಗೆಯಲ್ಲಿ ದನವನ್ನು ಕಟ್ಟಿ ಹಾಕಿ ಪುತ್ತೂರಿಗೆ ಬೆಳಿಗ್ಗೆ ಬಂದಿದ್ದರು. ಸಂಜೆ ಮನೆಗೆ ಹೋಗಿ ನೋಡುವಾಗ ದನ ಅಲ್ಲಿರಲಿಲ್ಲ. ಎರಡು ದಿನ ಹುಡುಕಾಡಿದರೂ ದನ ಪತ್ತೆಯಾಗಿಲ್ಲ. ಈ ಬಗ್ಗೆ ನೆಬಿಸಾರವರು ನಗರ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆಯಾದ ದನ ಅ.25 ರಂದು ಪತ್ತೆಯಾಗಿದೆ ಎಂದು ನೆಬಿಸಾ ರವರು ತಿಳಿಸಿದ್ದಾರೆ.
