





ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯಿಂದ ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ 14ರ ಒಳಗಿನ ವಯೋಮಾನದ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆಯ ಹುಡುಗರ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.


ಕ್ರೀಡಾಕೂಟದಲ್ಲಿ 14ರ ಬಾಲಕರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. 8ನೇ ತರಗತಿಯ ಆಕರ್ಷ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 8ನೇ ತರಗತಿಯ ಆಕರ್ಷ್ 200 ಮೀಟರ್ ಪ್ರಥಮ, ಗುಂಡು ಎಸೆತ ಪ್ರಥಮ, ನೂತನ್ 100 ಮೀಟರ್ ಪ್ರಥಮ, ಉದ್ದ ಜಿಗಿತ ದ್ವಿತೀಯ, ರಕ್ಷಕ್ 600 ಮೀಟರ್ ಪ್ರಥಮ, ಬಾಲಕರ 4*100 ರಿಲೇ ಪ್ರಥಮ, ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ಕೃಪಾ 9ನೇ ಎತ್ತರ ಜಿಗಿತ ತೃತೀಯ, ಯಜ್ಞ 200 ಮೀಟರ್ ಓಟದಲ್ಲಿ ತೃತೀಯ, ಭವಿತಾ 1500 ಮೀಟರ್ ಓಟ ದ್ವಿತೀಯ, 8ನೇ ತರಗತಿ ಪೂರ್ವಿತಾ ಗುಂಡು ಎಸೆತ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.





ಮುಖ್ಯ ಶಿಕ್ಷಕಿ ಅನ್ನಮ್ಮರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ರಾಮಕೃಷ್ಣ ತರಬೇತಿ ನೀಡಿರುತ್ತಾರೆ. ಶಿಕ್ಷಕಿ ಪ್ರಿಯಾ ಟೀಮ್ ಮ್ಯಾನೇಜರ್ ಆಗಿ ಸಹಕರಿಸಿದ್ದರು. ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಶಾಲಾಭಿವೃದಿ ಸಮಿತಿಯ ಕಾರ್ಯಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಶಿಕ್ಷಕ ವೃಂದ ಹಾಗೂ ಸಂತೋಷ್ ಆಚಾರ್ಯ ಇವರು ಮಕ್ಕಳನ್ನು ಅಭಿನಂದಿಸಿದರು.










