






ಪುತ್ತೂರು: ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಅ.27 ರಂದು ಬೆಳಗ್ಗೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶತರುದ್ರ ಸೇವೆ ಮಾಡಿಸಿದರು.ಬೆಳಗ್ಗೆ ಸೇವೆಯ ಸಂಕಲ್ಪ ನೆರವೇರಿಸಿ ತುಪ್ಪದೀಪ ಬೆಳಗಿಸಿದರು.



ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ದೇವಳದ ಗೌರವಾರ್ಥವಾಗಿ ಸಂಸದರಿಗೆ ಶಲ್ಯ ಹಾಕಿ ಗೌರವಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿಮಾರು, ನಗರ ಮಂಡಲದ ಅದ್ಯಕ್ಷ ಶಿವಕುಮಾರ್, ಕರಾವಳಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.











