ಪುತ್ತೂರು: ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರು ಕರ್ನಾಟಕ ಸರಕಾರದ ಅಧೀನ ಸಂಸ್ಥೆ ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಪ್ರಾಯೋಜಕತ್ವದಲ್ಲಿ ನಡೆಯಲಿರುವ ವಿಯೆಟ್ನಾಂ ಮತ್ತು ಮಲೇಷ್ಯಾ ರಾಷ್ಟ್ರಗಳಿಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಅ.27 ರಂದು ತೆರಳಲಿದ್ದಾರೆ.
ಕರ್ನಾಟಕ ರಾಜ್ಯದಿಂದ ಕೃಷಿಕ ಸಮಾಜದ ಒಟ್ಟು 40 ಮಂದಿ ಪದಾಧಿಕಾರಿಗಳು ತೆರಳಲಿದ್ದು, ಸದ್ರಿ ತಂಡದಲ್ಲಿ ದ.ಕ. ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ವಿಟ್ಲ ರವರೂ ತೆರಳಲಿದ್ದಾರೆ. ಅಧ್ಯಯನ ಪ್ರವಾಸ ಮುಗಿಸಿಕೊಂಡು ನ.3 ರಂದು ಅವರು ತಾಯ್ನಾಡಿಗೆ ಮರಳಲಿದ್ದಾರೆ. ವಿಯೆಟ್ನಾಂ ಮತ್ತು ಮಲೇಷ್ಯಾಗಳಲ್ಲಿ ಬೆಳೆಸಲಾಗುವ ವಾಣಿಜ್ಯ ಬೆಳೆಗಳಾದ ಕರಿಮೆಣಸು ಕೃಷಿಯ ಬಗ್ಗೆ ಅವರು ವಿಶೇಷ ಅಧ್ಯಯನ ಮಾಡಲಿದ್ದಾರೆ.
