ರೈಲ್ವೇ ವಿದ್ಯುದೀಕರಣ ಕಾಮಗಾರಿ : ರೈಲು ಸೇವೆಗಳ ತಾತ್ಕಾಲಿಕ ರದ್ದತಿ ಅವಧಿ ವಿಸ್ತರಣೆ

0

ಬೆಂಗಳೂರು: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯ ನಡೆಯುತ್ತಿರುವ ಕಾರಣ, ನೈಋತ್ಯ ರೈಲ್ವೆಯು ನ.2ರಿಂದ ಡಿ.15ರವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ. ಈ ಕಾರಣದಿಂದಾಗಿ ಕೆಲ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ರೈಲು ಮೊದಲು ನ.1 ರವರೆಗೆ ರದ್ದುಗೊಂಡಿತ್ತು. ಈಗ ನ.8ರಿಂದ 13ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ -ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೊದಲು ನ.2ರವರೆಗೆ ರದುಗೊಂಡಿತ್ತು. ಈಗ ನ.9 ರಿಂದ 14ರವರೆಗೆ ರದುಗೊಳ್ಳಲಿದೆ. ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಟೈ-ವೀಕ್ಲಿ ಎಕ್ಸ್ ಪ್ರೆಸ್ ಮೊದಲು ಅ.30ರವರೆಗೆ ರದುಗೊಂಡಿತ್ತು. ಈಗ ನ.2 ರಿಂದ 14ರವರೆಗೆ ರದುಗೊಳ್ಳಲಿದೆ. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ -ಯಶವಂತಪುರ ಟೈ-ವೀಕ್ಲಿ ಎಕ್ಸ್ ಪ್ರೆಸ್ ಮೊದಲು ಅ.30ರವರೆಗೆ ರದ್ದುಗೊಂಡಿತ್ತು. ಈಗ ನ.3 ರಿಂದ ಡಿ.15ರವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಟೈ-ವೀಕ್ಲಿ ಎಕ್ಸ್ ಪ್ರೆಸ್ ಮೊದಲು ಅ.31 ರವರೆಗೆ ರದ್ದುಗೊಂಡಿತ್ತು. ಈಗ ನ.3 ರಿಂದ ಡಿ.15ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಟೈ-ವೀಕ್ಲಿ ಎಕ್ಸ್ ಪ್ರೆಸ್ ಮೊದಲು ನ.1 ರವರೆಗೆ ರುದುಗೊಂಡಿತ್ತು. ಈಗ ನ.4 ರಿಂದ ಡಿ.16ರವರೆಗೆ ರದುಗೊಳಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here