ಪುತ್ತೂರು: ಮೂರನೇ ವರ್ಷದ `ಕಡ್ಯ ಕುಟ್ಯಾಮಿ ಉಪ್ಪಾಪ ಫ್ಯಾಮಿಲಿ ಮೀಟ್’ ನ.9ರಂದು ಸಂಟ್ಯಾರ್ ಗೋಲ್ಡನ್ ಗೇಟ್‌ನಲ್ಲಿ ನಡೆಯಲಿದೆ.
ಕಡ್ಯ ಕುಟುಂಬದ ಸಾಧಕರಿಗೆ ಸನ್ಮಾನ, ಟ್ಯಾಲೆಂಟ್ ಶೋ, ಮೋಟಿವೇಶನಲ್ ಟಾಕ್, ಫನ್ನಿಗೇಮ್ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮ ನಡೆಯಲಿದ್ದು, ಕಡ್ಯ ಕುಟ್ಯಾಮಿ ಉಪ್ಪಾಪ ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 9ರಿಂದ ಸಂಜೆ 5.30ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಕಡ್ಯ ಮುಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
