ಮಂಗಳೂರಿನಲ್ಲಿ ತತ್ವ ಸ್ಕೂಲ್ ಆರ್ಟ್ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ

0

ಪುತ್ತೂರು: ಪುತ್ತೂರಿನ ತತ್ವ ಸ್ಕೂಲ್ ಆಫ್ ಆರ್ಟ್ ಇಲ್ಲಿನ‌ ಕಲಾ ವಿದ್ಯಾರ್ಥಿಗಳ ಚಿತ್ರಕಲಾ‌ ಪ್ರದರ್ಶನ ಮಂಗಳೂರು ನಗರದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿದೆ. 

ಮಂಗಳೂರು ನಗರದ ಗೋವಿಯಸ್ ಕಾಂಪ್ಲೆಕ್ಸ್ ನ ವರ್ಣ ಆರ್ಟ್ ಗ್ಯಾಲರಿಯಲ್ಲಿ ಕಲಾ ಪ್ರದರ್ಶನ ನಡೆಯುತ್ತಿದೆ. ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ ಬಿ ಪುರಾಣಿಕ್ ಕಲಾ ಪ್ರದರ್ಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್, ಸಂತ ಆಲೋಷಿಯಸ್ ಪ್ರೌಢ ಶಾಲೆಯ ಕಲಾಶಿಕ್ಷಕ  ಜಾನ್ ಚಂದ್ರನ್, ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇದರ ಗೌರವಾಧ್ಯಕ್ಷ ಗಣೇಶ್ ಸೋಮಯಾಜಿ ಆಗಮಿಸಿ ಕಲಾ ವಿದ್ಯಾರ್ಥಿಗಳ ಕಲೆಗೆ ಪ್ರೋತ್ಸಾಹ ನೀಡಿ ಶುಭಹಾರೈಸಿದರು. ವರ್ಣ ಸ್ಕೂಲ್ ಆಫ್ ಆರ್ಟ್ ಮಂಗಳೂರು ಇದರ ನಿರ್ದೇಶಕ ರೋಹಿತ್ ಕುಮಾರ್ ಸಂಪೂರ್ಣ ಸಹಕಾರವಿತ್ತರು. 

ಏನೆಲ್ಲಾ ವಿಶೇಷತೆ ಇದೆ?

ತತ್ವ ಸ್ಕೂಲ್ ಆಫ್ ಆರ್ಟ್‌, ಪುತ್ತೂರು ಇಲ್ಲಿ ಮಕ್ಕಳಿಗೆ, ಯವಕ, ಯುವತಿಯರಿಗೆ ವಿವಿಧ ಕಲಾ ಪ್ರಕಾರಗಳ ಕಲಾ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿ ಮೂಡಿಬಂದ ಕಲೆಗಳ ಪ್ರದರ್ಶನ ನಡೆಯುತ್ತಿದೆ. ಕ್ಯಾನ್ವಸ್, ಪೆನ್ಸಿಲ್ ಶೇಡಿಂಗ್, ಚುಕ್ಕಿ ಚಿತ್ರ, ಪೋಸ್ಟರ್ ಕಲರ್ ಪೈಟಿಂಗ್, ಆಯಿಲ್ ಪೆಸ್ಟಲ್, ಆಯಿಲ್ ಪೈಟಿಂಗ್, ಜಲವರ್ಣ ಚಿತ್ರ, ಹೀಗೆ ವಿವಿಧ ಕಲಾ ಮಾಧ್ಯಮಗಳ ಚಿತ್ರಕಲೆಗಳಿವೆ. 

ಪುತ್ತೂರು ಪರಿಸದ ವಿದ್ಯಾರ್ಥಿಗಳ ಕಲಾಕುಂಚ...
ತತ್ವ ಸ್ಕೂಲ್ ಆಫ್ ಆರ್ಟ್, ಪುತ್ತೂರಿನ ವಿದ್ಯಾರ್ಥಿಗಳಾದ  ದಿವ್ಯಶ್ರೀ, ದಿಹರ್ಶಾ, ಜಾನ್ವಿ ಶೆಟ್ಟಿ , ಸೌಮ್ಯ. ಎಸ್, ಸಾನ್ವಿ ಪಿ, ಜೆ.ಕೆ. ಸೋಹನ್, ರತುಲ್ ಅದ್ವೈತ್, ಅನ್ವಿ, ಪೂರ್ವಿ ಜೆ. ಎ, ಅನುಶ್ರೀ. ಎಂ, ಧ್ರುವ. ಜೆ, ರಕ್ಷಿತಾ, ಸೌಪರ್ಣಿಕಾ ಎಸ್. ದನೆಗೊಂದ್ರ, ಅವನಿ ಎಸ್ ವಿ, ಸ್ನೇಹಿತ್, ನಿಲಿಷ್ಕಾ ಕಲ್ಪನೆ, ಹಂಸಿಕ ಡಿ.ಎಸ್, ಇಚ್ಚಿಕಾ ಜೈನ್, ಚಿಂತನ ಎಸ್ ಭಟ್ ಪ್ರಜ್ವಲ್ ಕೃಷ್ಣ,  ಇವರ ಆಯ್ದ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಮಂಗಳೂರಿನ ವರ್ಣ ಆರ್ಟ್ ಗ್ಯಾಲರಿಯಲ್ಲಿ ನವೆಂಬರ್ ಅಂತ್ಯದವರೆಗೂ ಈ ಕಲಾ ಪ್ರದರ್ಶನವನ್ನು ವೀಕ್ಷಿಸಬಹುದು.‌

LEAVE A REPLY

Please enter your comment!
Please enter your name here