ಇನ್ಸ್ಟಾದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾನಹಾನಿ ವಿಡಿಯೋ- ಕಡಬ ಬ್ಲಾಕ್ ನಿಂದ ಪೊಲೀಸರಿಗೆ ದೂರು- ಪ್ರಕರಣ ದಾಖಲು

0

ಕಡಬ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾನಹಾನಿ ವಿಡಿಯೋವನ್ನು ಅಪ್ಲೋಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್ ಪಿ.ಕೆ.ಕಡಬ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

karma_karma_is_back ಎಂಬ ಇನ್‌ಸ್ಟಾಗ್ರಾಂ ಹೆಸರಿನ ಖಾತೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಮುಸ್ಲಿಂ ಧರ್ಮದ ಟೋಪಿ ಧರಿಸಿದ ರೀತಿಯಲ್ಲಿ ಮತ್ತು ಅವರ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದಂತೆ, ಮುಖ್ಯ ಮಂತ್ರಿಯವರು ಕುಳಿತ ಚೆಯರ್ ಕೆಳಗೆ ಪಟಾಕಿ ಇರಿಸಿ ಬೆಂಕಿ ಹಚ್ಚಿ ಸಿಡಿಸುವಂತೆ ಮಾನಹಾನಿಕಾರ ವಿಡಿಯೋವೊಂದನ್ನು ತಯಾರಿಸಿ ಪೋಸ್ಟ್‌ ಮಾಡಲಾಗಿದೆ. ಮಾತ್ರವಲ್ಲದೆ ಈ ಚಿತ್ರದಲ್ಲಿ ದೀಪಾವಳಿ ಹಬ್ಬಕ್ಕೆ ಶುಭಕೋರುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದು ಎರಡು ಧರ್ಮಗಳ ನಡುವೆ ದ್ವೇಷ ಹಂಚುವ, ಸಮಾಜದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ karma_karma_is_back ಎಂಬ ಇನ್ಸ್ಟಗ್ರಾಂ ಎಂಬ ಅಕೌಂಟ್ ಹೊಂದಿದ URL ID https://www.instagram.com/karma_karma_is_back?igsh=MW9pYXd1dTV0ajQwag== ಆಗಿದ್ದು ಸದ್ರಿ ಖಾತೆಗೆ ಸಂಬಂದಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕಡಬ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್‌ ಪಿ ಕೆ ನಿಯೋಗದ ಜೊತೆ ತೆರಳಿ ಕಡಬ ಪೊಲೀಸರಿಗೆ ದೂರು ಸಲ್ಲಿಸಿದ್ದು ಪೊಲೀಸರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ.

ಕಾಂಗ್ರೆಸ್ ನಿಯೋಗದಲ್ಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪಿ.ಪಿ ವರ್ಗೀಸ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಕಡಬ, ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಕೃಷ್ಣಪ್ಪ ನಾಯ್ಕ, ಫೈಸಲ್ ಕಡಬ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಫಜಲ್ ಕೋಡಿಂಬಾಳ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಾಕಿರ್ ಕಡಬ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಭೂಮಿಕಾ, ಹಿರಿಯ ಕಾಂಗ್ರೆಸ್ಸಿಗ ಕೆ.ಪಿ ತೋಮಸ್,ಇಲ್ಯಾಸ್ ಕಡಬ, ತೋಮಸ್ ನೂಜಿಬಾಳ್ತಿಲ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here