ಕಡಬ ಗೌಡ ಸಂಘಕ್ಕೆ ಡಾ.ಕೆ.ವಿ.ಚಿದಾನಂದರಿಂದ 50 ಲಕ್ಷ ರೂ. ದೇಣಿಗೆ

0

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬದ ಹೊಸಮಠ ಎಂಬಲ್ಲಿ ಬೃಹತ್ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರು ಅ.29ರಂದು ತನ್ನ 70ನೇ ವರ್ಷದ ಹುಟ್ಟುಹಬ್ಬದ ಸಂದರ್ಭ ಅದಕ್ಕೆ ರೂ.50 ಲಕ್ಷ ದೇಣಿಗೆ ನೀಡಿದರು.

ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದಿಂದ ಗೌರವ ಪೂರ್ವಕವಾಗಿ ಹುಟ್ಟು ಹಬ್ಬದ ಪ್ರಯುಕ್ತ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಗೌಡ ಬೈಲು, ನಿರ್ದೇಶಕರಾದ ಆಶಾ ತಿಮ್ಮಪ್ಮ ಗೌಡ ಕುಂಡಡ್ಕ, ಪ್ರವೀಣ್ ಕುಂಟ್ಯಾನ, ಚಂದ್ರಶೇಖರ ಗೌಡ ಕೋಡಿಬೈಲು, ತಾಲೂಕು ಸಲಹಾ ಸಮಿತಿಯ ಮುಖ್ಯಸ್ಥರಾದ ಜನಾರ್ದನ ಗೌಡ ಪಣೆಮಜಲು, ಸಲಹಾ ಸಮಿತಿಯ ಸದಸ್ಯರಾದ ಡಾ.ಶಿವಕುಮಾರ್ ಹೊಸೊಳಿಕೆ, ಪ್ರಮುಖರಾದ ತಿಮ್ಮಪ್ಪ ಗೌಡ ಕುಂಡಡ್ಕ, ವ್ಯವಸ್ಥಾಪಕರಾದ ಅಶೋಕ್ ಶೇಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here