





ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘ ಪುತ್ತೂರು ದ.ಕ ಇದರ ಕೆಯ್ಯೂರು ಶಾಖೆಯ ಶುಭಾರಂಭ ಅ.30ರಂದು ಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆ ಯೊಂದಿಗೆ ನಡೆಯಿತು.



ಸಹಕಾರಿ ಅಧ್ಯಕ್ಷ ವಿ.ಕೆ ಜಯರಾಮರೈ ದೀಪ ಬೆಳಗಿಸಿದರು. ಬಳಿಕ ಗ್ರಾಹಕ ಸಮಾವೇಶ, ಆರ್ಥಿಕ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು.





ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ ಕುಮಾರ್ ಬಿ ಸ್ವಾಗತಿಸಿ,ಕೋರ್ ಬ್ಯಾಂಕಿಂಗ್ ಮಾಹಿತಿ ನೀಡಿದರು. ಸಹಕಾರಿಯ ಉಪಾಧ್ಯಕ್ಷ ಜಗಜೀವನ ದಾಸ್ ರೈ ರವರು ಸಹಕಾರಿ ವ್ಯವಹಾರ ಮತ್ತು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರದ ಮಾಹಿತಿ ನೀಡಿದರು.

ಆರ್ಥಿಕ ಜಾಗೃತಿ ಉಪನ್ಯಾಸವನ್ನು ಸಹಕಾರಿಯ ನಿರ್ದೇಶಕರಾದ ಡಾ| ರಾಜೇಶ್ ಬೆಜ್ಜಂಗಳ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರಿ ಅಧ್ಯಕ್ಷ ವಿ.ಕೆ ಜಯರಾಮ ರೈ ಮಾತನಾಡಿ, ನಮ್ಮ ಸಹಕಾರಿಯು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿ ಒಂದೇ ಕೇಂದ್ರ ಕಛೇರಿಯಲ್ಲಿ ಖಾತೆ ಹೊಂದಿದ ಗ್ರಾಹಕರು ಶಾಖೆಯಲ್ಲಿಯೇ ಎಲ್ಲ ವ್ಯವಹಾರಗಳನ್ನು ಮಾಡಲು ಅವಕಾಶ ಹೊಂದಿರುತ್ತದೆ. ನಮ್ಮ ಸಹಕಾರಿಯ ಕೆಲವೇ ದಿನಗಳ್ಲಲಿ ಐಎಫ್ ಸಿ ಕೋಡ್ ಗಳು ಸಿಗಲಿದೆ. ನಂತರ ತಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಅವಕಾಶಗಳಿವೆ. 1 ತಿಂಗಳಿನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯುವುದು. ಎಲ್ಲರೂ ಸಹಕಾರಿ ಸಂಘದಲ್ಲಿ ಸದಸ್ಯರಾಗಿ ವ್ಯವಹಾರಗಳನ್ನು ಮಾಡಿ ಎಂದರು.

ಸಹಕಾರಿಯ ಸ್ಥಾಪಕ ಅಧ್ಯಕ್ಷರಾದ “ಸಹಕಾರ ರತ್ನ” ದಂಬೆಕ್ಕಾನ ಸದಾಶಿವ ರೈ ರವರು ಪ್ರಾಸ್ತಾವಿಕವಾಗಿ ಮಾತಾನಾಡಿದರು.ಸಹಕಾರಿಯ ನಿರ್ದೇಶಕರಾದ ಆನಂದ ರೆಡ್ಡಿ.ಎಂ ಬೆಂಗಳೂರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಬಾಬುಗೌಡ, ವಿಶ್ವನಾಥ ನಾಯ್ಕ.ಕೆ, ಸಂದೀಪ್ ರೈ.ಸಿ, ದೇವಪ್ಪ ಗೌಡ, ಪ್ರಭಾಕರ ರೈ.ಕೆ, ಸುರೇಖಾ ಬಿ.ರೈ, ವಾಣೀಶ್ರೀ.ಡಿ, ಆನಂದ ರೈ ಪಿ., ಸಲಹಾ ಸಮಿತಿಯ ಸದಸ್ಯರಾದ ವಿಶ್ವನಾಥ ಪೂಜಾರಿ ಕೆ., ಉಮಾಕಾಂತ್ ಗೌಡ ಬೈಲಾಡಿ, ಸಂತೋಷ ಕುಮಾರ್ ಇಳಂತಾಜೆ, ಶಿವಶ್ರೀ ರಂಜನ್ ರೈ, ಜಯಂತ ಪೂಜಾರಿ. ಕೆ, ಜೈರಾಜ್ ಭಂಡಾರಿ, ರಮೇಶ್ ರೈ ಬೋಲೋಡಿ, ಶ್ರೀಪತಿ ಭಟ್, ಭವಾನಿ ಪಲ್ಲತ್ತಡ್ಕ , ಬಾಲಕೃಷ್ಣ ನೆಟ್ಟಾಳ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು, ವಿಶ್ವನಾಥ ನಾಯ್ಕ ಕೆ. ವಂದಿಸಿದರು.


 
            
