ಕತ್ರಿಬೈಲ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್ ಸೆಂಟರ್ ಶುಭಾರಂಭ

0

ಕ್ಲಿನಿಕ್ ಸೇವೆಗಳು
*ಸಮಾಲೋಚನೆ ಮತ್ತು ಹಲ್ಲಿನ ಎಕ್ಸ್-ರೇಗಳು
*ಡೆಂಟಲ್ ಇಂಪ್ಲಾಂಟ್‌ಗಳು(ಕೃತಕ ಹಲ್ಲುಗಳ ಶಾಶ್ವತ ಜೋಡಣೆ)
*ಕ್ರೌನ್ ಮತ್ತು ಬ್ರಿಡ್ಜ್
*ದಂತ ಪಂಕ್ತಿ ಅಥವಾ ಹಲ್ಲಿನ ಸೆಟ್
*ದಂತದ ಕುಳಿ ತುಂಬುವಿಕೆಗಳು
*ರೂಟ್‌ಕೆನಲ್ ಚಿಕಿತ್ಸೆ, ಡೆಂಟಲ್ ಕ್ಲೀನಿಂಗ್
*ಸ್ಟೈಲ್ ಡಿಸೈನಿಂಗ್, ವಕ್ರದಂತ ಚಿಕಿತ್ಸೆ
*ಹಲ್ಲು ಕೀಳುವಿಕೆ, ಓರಲ್ ಸ್ಕ್ಯಾನಿಂಗ್, ಹಲ್ಲುಗಳನ್ನು ಬಿಳುಪುಗೊಳಿಸುವುದು

ಪುತ್ತೂರು: ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಬಳಿಯ ಡಾಯಸ್ ಕಾಂಪ್ಲೆಕ್ಸ್‌ನ ಚಿತ್ತಾರ ಸೈನ್ ಗ್ಯಾಲರಿ ಹಿಂದುಗಡೆ ಪ್ರೊಸ್ತೊಡಾಂಟಿಸ್ಟ್ ಮತ್ತು ಇಂಪ್ಲಾಂಟಾಲಜಿಸ್ಟ್ ಡಾ.ಶಂಕರ ಕೃಷ್ಣ ಕೆ.ರವರ ಕತ್ರಿಬೈಲ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್(ಕೃತಕ ಹಲ್ಲುಗಳ ಶಾಶ್ವತ ಜೋಡಣೆ) ಸೆಂಟರ್ ಅ.೩೧ ರಂದು ಶುಭಾರಂಭಗೊಂಡಿತು.


ನಗುಮುಖದ ವ್ಯಕ್ತಿತ್ವ ಮುಖದಲ್ಲಿ ಕಾಣಬೇಕಾದರೆ ಹಲ್ಲುಗಳು ಪ್ರಮುಖ ಪಾತ್ರ-ಡಾ.ಭಾಸ್ಕರ್
ಪುತ್ತೂರು ಸಿಟಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರಾದ ಡಾ.ಭಾಸ್ಕರ್ ಎಸ್ ಮಾತನಾಡಿ, ಮನುಷ್ಯನ ದೇಹದ ಎಲ್ಲಾ ಅಂಗಾಂಗಗಳು ಬಹಳ ಪ್ರಾಮುಖ್ಯ ಅದರಲ್ಲೂ ನಗುಮುಖದ ವ್ಯಕ್ತಿತ್ವ ಮುಖದಲ್ಲಿ ಕಾಣಬೇಕಾದರೆ ಹಲ್ಲುಗಳಲ್ಲಿ ಯಾವುದೇ ತೊಂದರೆ ಬಾರದಂತೆ ನಾವು ನೋಡಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದಂತ ವೈದ್ಯಕೀಯ ಕ್ಷೇತ್ರವು ಪ್ರಸ್ತುತ ಹೊಸ ಹೊಸ ಆಧುನಿಕ ತಂತ್ರಜ್ಞಾನ ಹೊಂದಿದ್ದು ಹಲ್ಲುಗಳ ಇಂಪ್ಲಾಂಟ್ ಕೂಡ ಹೊಂದಿದ್ದು ನಮ್ಮ ಪುತ್ತೂರು ಸಿಟಿ ಆಸ್ಪತ್ರೆಯ ಹತ್ತಿರವೇ ಉದ್ಘಾಟನೆಗೊಂಡ ಅತ್ಯಾಧುನಿಕ ಸೌಕರ್ಯ ಇರುವ ಈ ದಂತ ಚಿಕಿತ್ಸಾಲಯಕ್ಕೆ ಎಲ್ಲರೂ ಪ್ರೋತ್ಸಾಹ ನೀಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಆಧುನಿಕ ಸೌಕರ್ಯಗಳೊಂದಿಗೆ ದಂತ ಚಿಕಿತ್ಸಾಲಯವನ್ನು ಪುತ್ತೂರಿನ ಜನತೆಗೆ ಪರಿಚಯಿಸಿದೆ-ಡಾ.ಜೆ.ಸಿ ಅಡಿಗ
ಚೇತನಾ ಆಸ್ಪತ್ರೆಯ ವೈದ್ಯರಾದ ಡಾ.ಜೆ.ಸಿ ಅಡಿಗರವರು ಮಾತನಾಡಿ, ಪುತ್ತೂರಿಗೆ ಉತ್ತಮ ದಂತ ಚಿಕಿತ್ಸೆಯ ಲಭ್ಯತೆ ಹಾಗೂ ಅವಶ್ಯಕತೆ ಇದೆ. ಎಂಬಿಬಿಎಸ್‌ನಲ್ಲಿ ಉತ್ತಮ ಡಿಗ್ರಿ ಪಡೆದು ಎರಡು ವರ್ಷ ಅಭ್ಯಾಸ ಮಾಡಿ ಅನುಭವವಿರುವ ಯುವಕ ಡಾ.ಶಂಕರ್ ಕೃಷ್ಣರವರು ಇದೀಗ ಆಧುನಿಕ ಸೌಕರ್ಯಗಳೊಂದಿಗೆ ದಂತ ಚಿಕಿತ್ಸಾಲಯವನ್ನು ಪುತ್ತೂರಿನ ಜನತೆಗೆ ಪರಿಚಯಿಸಿದ್ದು ಡಾ.ಶಂಕರ್ ಕೃಷ್ಣರವರು ಜನತೆಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಕ್ಲಿನಿಕ್ ಉತ್ತರೋತ್ತರ ಪ್ರಗತಿ ಹೊಂದಲಿ-ಶಾಮಣ್ಣ ಕೆ
ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಶಾಮಣ್ಣ ಕೆ ಮಾತನಾಡಿ, ಪುತ್ತೂರಿನ ಈ ಹೃದಯಭಾಗದಲ್ಲಿ ಸುಸಜ್ಜಿತವಾದ ಡೆಂಟಲ್ ಕ್ಲಿನಿಕ್ ಇಂದು ಲೋಕಾರ್ಪಣೆಗೊಂಡಿದೆ. ದಂತ ಸಮಸ್ಯೆಯ ನೋವನ್ನು ನಿವಾರಿಸಲು ಬರುವ ಜನತೆಗೆ ನೋವನ್ನು ನಿವಾರಿಸುವ ಚಿಕಿತ್ಸೆ ಇಲ್ಲಿ ಸಿಗಲಿ ಜೊತೆಗೆ ಈ ಕ್ಲಿನಿಕ್ ಸರ್ವರ ಆಶೀರ್ವಾದದಿಂದ ಉತ್ತರೋತ್ತರ ಪ್ರಗತಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.


ಎಪಿಎಂಸಿ ರಸ್ತೆ ಬದಲು ಆಸ್ಪತ್ರೆ ರಸ್ತೆ ಆಗಿ ಬದಲಾಗಿದೆ-ಡಾ.ಸುರೇಶ್ ಪುತ್ತೂರಾಯ
ಬೊಳ್ವಾರು ಮಹಾವೀರ ಮೆಡಿಕಲ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಚಿಕಿತ್ಸೆಯ ಜೊತೆಗೆ ದಂತ ಆರೋಗ್ಯದ ಕುರಿತು ಜನತೆಗೆ ಮಾಹಿತಿ ನೀಡುವಂತಾಗಲಿ. ಎಪಿಎಂಸಿ ರಸ್ತೆಯಲ್ಲಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಹೆಚ್ಚೆಚ್ಚು ಆಗುತ್ತಿದ್ದು ಎಪಿಎಂಸಿ ರಸ್ತೆ ಬದಲು ಆಸ್ಪತ್ರೆ ರಸ್ತೆ ಆಗಿ ಬದಲಾಗಿದೆ ಎಂದರು.


ಕ್ಲಿನಿಕ್ ಮುಂದೆ ಡೆಂಟಲ್ ಕಾಲೇಜು ಆಗಿ ಪರಿವರ್ತನೆಯಾಗಲಿ-ಡಾ.ಎ.ಪಿ ಭಟ್
ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ.ಎ.ಪಿ ಭಟ್ ಮಾತನಾಡಿ, ಹಲ್ಲಿನ ಆರೋಗ್ಯದಲ್ಲಿ ದಂತ ಪಂಕ್ತಿಯ ಸೌಂದರ್ಯ ಆರೋಗ್ಯಕ್ಕೆ ಮುಖ್ಯವಾದ ವಿಷಯ. ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ನೀಡುವ ತಿಂಡಿ-ತಿನಸುಗಳು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದವು ಆದರೆ ಇಂದಿನ ಸಿಹಿಯುಕ್ತ ತಿಂಡಿಗಳು ಹಲ್ಲುಗಳ ಸೌಂದರ್ಯಕ್ಕೆ ಹಿನ್ನೆಡೆ ಉಂಟು ಮಾಡಿದೆ. ದಂತ ವೈದ್ಯಶಾಸ್ತ್ರದಲ್ಲಿ ಬೇಕಾದಷ್ಟು ಚಿಕಿತ್ಸೆಗಳಿದ್ದು ಪುತ್ತೂರು ಪರಿಸರದಲ್ಲಿ ಆರಂಭಗೊಂಡ ಈ ಕ್ಲಿನಿಕ್ ಮುಂದೆ ಡೆಂಟಲ್ ಕಾಲೇಜು ಆಗಿ ಪರಿವರ್ತನೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಉತ್ತಮ ಜೀವನಕ್ರಮದಿಂದ ಉತ್ತಮ ಆರೋಗ್ಯ-ಡಾ.ಎಂ.ಎಸ್ ಭಟ್
ಡಾ.ಎಂ.ಎಸ್ ಭಟ್ ಬಿಸಿ ರೋಡ್ ಮಾತನಾಡಿ, ನಾವು ಎಲ್ಲರೊಂದಿಗೆ ನಗುಮುಖವಾಗಿ, ಯಾವುದೇ ದ್ವೇಷ, ಕಾಮ, ಕ್ರೋಧ, ಮಧ, ಲೋಭ, ಮತ್ಸರವೆನ್ನದೆ ಕೆಲಸ ಮಾಡಿದಾಗ ನಾವು ಜೀವನದಲ್ಲಿ ಜಯಿಸುವೆವು. ನಾವು ನಮ್ಮ ಜೀವನಕ್ರಮ ಬದಲಾಯಿಸಿದಾಗ ಮಾತ್ರ ಉತ್ತಮ ಆರೋಗ್ಯಕ್ಕೆ ಬದಲಾಗಬಲ್ಲೆವು ಎಂದರು.


ಸನ್ಮಾನ
ಕತ್ರಿಬೈಲು ಕ್ಲಿನಿಕ್‌ನ ಇಂಟೀರಿಯರ್ ಜೊತೆಗೆ ಎಲ್ಲಾ ಕನ್‌ಸ್ಟ್ರಕ್ಷನ್ ಕೆಲಸ ಕಾರ್ಯಗಳನ್ನು ಸುಂದರವಾಗಿ ಮಾಡಿಕೊಟ್ಟ ಇಂಜಿನಿಯರ್ ದಿನೇಶ್ ಭಟ್‌ರವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ವಲೇರಿಯನ್ ಡಾಯಸ್, ನಿವೃತ್ತ ಪಶು ವೈದ್ಯ ಡಾ.ಎಂ.ಎಸ್ ಭಟ್, ಡಾಯಸ್ ಕಾಂಪ್ಲೆಕ್ಸ್ ಮಾಲಕ ದೀಪಕ್ ಡಾಯಸ್, ಪುತ್ತೂರಿನ ವೈದ್ಯರುಗಳು ಸಹಿತ ಹಲವು ಗಣ್ಯರು, ಡಾ.ಶಂಕರ್ ಕೃಷ್ಣರವರ ತಾಯಿ ವನಿತಾ, ಸಹೋದರಿಯರಾದ ಪೂರ್ವಿ, ಪ್ರೀತಿ ಸಹಿತ ಶಂಕರ್ ಕೃಷ್ಣರವರ ಕುಟುಂಬಿಕರು
ಉಪಸ್ಥಿತರಿದ್ದರು. ಶ್ರೇಯ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಕತ್ರಿಬೈಲು ವೆಂಕಟೇಶ್ ಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಶಂಕರ್ ಕೃಷ್ಣ ಕೆ ವಂದಿಸಿದರು. ಶಿವರಾಮ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಮಗ ಪುತ್ತೂರಿನ ಜನತೆಯ ಸೇವೆ ನೀಡಬೇಕು ಆಶಯ
ಪುತ್ತೂರಿನ ಕೇಂದ್ರ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವುದು ನಮ್ಮ ಆಶಯದ ಜೊತೆಗೆ ನನ್ನ ಮಗ ಪುತ್ತೂರಿನ ಜನತೆಯೊಂದಿಗೆ ವ್ಯವಹಾರದ ಜೊತೆಗೆ ಸಹಬಾಳ್ವೆ ನಡೆಸಲು, ಮಗ ಹತ್ತಿರದಲ್ಲೇ ಇರಬೇಕು ಎಂಬುದಾಗಿ ಈ ಭಾಗದಲ್ಲಿ ಸುಸಜ್ಜಿತ ದಂತ ಚಿಕಿತ್ಸಾಲಯ ಪ್ರಾರಂಭಿಸಿದ್ದು ಈ ಚಿಕಿತ್ಸಾಲಯದ ಉತ್ತರೋತ್ತರ ಯಶಸ್ಸಿಗೆ ಸರ್ವರೂ ಹಾರೈಸಬೇಕು.
ಕತ್ರಿಬೈಲು ವೆಂಕಟೇಶ್ ಶರ್ಮ, ನಿವೃತ್ತ ಶಿಕ್ಷಕರು ಹಾಗೂ ಡಾ.ಶಂಕರ್ ಕೃಷ್ಣ ಕೆ.ರವರ ತಂದೆ

ಟೀಮ್ ವರ್ಕ್ ಆಗಿ ಸೇವೆ…
ನಾನು ಸ್ವ-ಪ್ರಯತ್ನದಿಂದ ಡೆಂಟಿಸ್ಟ್ ಆದುದಕ್ಕಿಂತಲೂ ಹೆಚ್ಚು ನನ್ನನ್ನು ಡೆಂಟಿಸ್ಟ್ ಮಾಡಿದವರ ಪ್ರಯತ್ನವಿದೆ, ಯಾವುದೇ ವಿಷಯದಲ್ಲಿ ಪ್ರಗತಿ, ಯಶಸ್ಸು ಕಾಣಬೇಕಾದರೆ ಅದಕ್ಕೆ ಹಿರಿಯರ ಹಾರೈಕೆ, ಆಶೀರ್ವಾದ ಬೇಕೇ ಬೇಕು. ಕ್ಲಿನಿಕ್ ಗೆ ಡಾ.ಅಮಿತ್ ವಾಲ್ವೆಕರ್ (ಪಿರಿಯೋಡಾಂಟಿಕ್ಸ್) ಡಾ.ಮುರಳೀಧರ್(ಆರ್ಥೋಡಾಂಟಿಸ್ಟ್), ಡಾ.ಸಂದೀಪ್(ಒರಲ್ ಸರ್ಜನ್), ಡಾ.ಅನೂಜ್(ಎಂಡೋಡಾಂಟಿಸ್ಟ್), ಡಾ.ರಾಮಪ್ರಕಾಶ್(ಒರಲ್ ಮೆಡಿಸಿನ್ & ರೆಡಿಯೋಲಜಿ)ರವರು ಮಂಗಳೂರಿನಿಂದ ಇಲ್ಲಿಗೆ ಸಂದರ್ಶನ ನೀಡುವ ವೈದ್ಯರುಗಳಾಗಿದ್ದು ನಾವು ಟೀಮ್ ವರ್ಕ್ ಆಗಿ ಸೇವೆ ನೀಡಲಿದ್ದು ಜನತೆ ನಮಗೆ ಹರಸಬೇಕು ಅಲ್ಲದೆ ಭೇಟಿ ಕಾಯ್ದಿರಿಸಲು ೯೪೪೯೬೨೮೨೧೨ ನಂಬರಿಗೆ ಸಂಪರ್ಕಿಸಬಹುದು.
ಡಾ.ಶಂಕರ್ ಕೃಷ್ಣ ಕೆ, ಪ್ರೊಸ್ತೊಡಾಂಟಿಸ್ಟ್ ಮತ್ತು ಇಂಪ್ಲಾಂಟಾಲಜಿಸ್ಟ್ ಕ್ಲಿನಿಕ್ ದಂತ ವೈದ್ಯರು

LEAVE A REPLY

Please enter your comment!
Please enter your name here