





ಪುತ್ತೂರು: ಪುತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗು ಹಿರಿಯ ಜಿನಸು ವ್ಯಾಪಾರಿಯಾಗಿದ್ದ ಯೋಗೀಶ್ ಭಕ್ತ (67ವ)ರವರು ನ.1ರಂದು ರಾತ್ರಿ ನಿಧನರಾದರು.


ಸಂಪ್ಯ ನಿವಾಸಿ ಯೋಗೀಶ್ ಭಕ್ತ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ನಲ್ಲಿ ಆನಕ ಭಾರಿಸುತ್ತಿದ್ದರು. ಪುತ್ತೂರು ಮುಖ್ಯರಸ್ತೆಯಲ್ಲಿ ಜಿನಸು ವ್ಯಾಪಾರ ನಡೆಸುತ್ತಿದ್ದು ಕೆಲ ಸಮಯದಿಂದ ಜಿನಸು ವ್ಯಾಪಾರ ನಿಲ್ಲಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮೃತರು ಪತ್ನಿ, ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಪುತ್ರಿ ಅಪೂರ್ವ ಅವರನ್ನು ಅಗಲಿದ್ದಾರೆ.















