





ಪುತ್ತೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ. ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರ ಮಹೋತ್ಸವ ಪ್ರಯುಕ್ತ ಕೋಟೇಶ್ವರ ಮತ್ತು ಕುಂದಾಪುರ ಶಾಖೆಯ ಸದಸ್ಯ-ಗ್ರಾಹಕರ ಸಮಾವೇಶ ಇತ್ತೀಚೆಗೆ ಕೋಟೇಶ್ವರ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು.







ಸಂಘದ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ, ಸದಸ್ಯರು ಸಂಪಾದನೆ ಮಾಡುವುದು ಎಷ್ಟು ಮುಖ್ಯವೋ ಉಳಿತಾಯ ಕೂಡ ಅಷ್ಟೇ ಮುಖ್ಯ. ತಮ್ಮ ಮಕ್ಕಳಿಗೆ ಈಗಿನಿಂದಲೇ ಉಳಿತಾಯ ಮಾಡುವ ಪ್ರಜ್ಞೆ ಬೆಳೆಸಬೇಕೆಂದೂ, ಉಳಿತಾಯದ ಹಣವೇ ಕಷ್ಟ ಕಾಲಕ್ಕೆ ಬರುವುದಾಗಿ ಅವರು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ, ಕೋಟೇಶ್ವರ ಶಾಖೆಯ ಆರಂಭ ಹೇಗೆ ಆಯಿತು ಎನ್ನುವುದರೊಂದಿಗೆ ಸಂಘಕ್ಕೆ ಶುಭ ಹಾರೈಸಿದರು.
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಸದಾನಂದ ನಾಯ್ಕ್ ಮಾತನಾಡಿ, ಸೈಬರ್ ಸೆಕ್ಯೂರಿಟಿ ಕ್ರೈಂ, ಶಾಖೆಯ ಭದ್ರತೆಯ ಬಗ್ಗೆ ಹಾಗೂ ಇತ್ತೀಚೆಗೆ ನಡೆಯುತ್ತಿರುವ ಆನ್ಲೈನ್ ಕ್ರೈಂಗಳ ಬಗ್ಗೆ ಹೆಚ್ಚು ಮಾಹಿತಿ ನೀಡಿ ಇದರ ಬಗ್ಗೆ ಜಾಗರೂಕರಾಗಿರಬೇಕೆಂದರು. ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯು ಇನ್ನಷ್ಟೂ ಪ್ರಗತಿ ಹೊಂದಲಿ ಎಂದು ಆಶಿಸಿದರು.
ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಿ. ಶ್ರೀಧರ್ ಆಚಾರ್ಯ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಮಾಜ ಸೇವಾ ಸಂಘ ಕೋಟೇಶ್ವರ ಇದರ ಅಧ್ಯಕ್ಷ ಟಿ. ಸತ್ಯನಾರಾಯಣ ಆಚಾರ್ಯ, ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಚೇಂಪಿ ಇದರ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ಯ, ಸೂರ್ಯಕಾಂತಿ ನಿವೃತ್ತ ಸಹ ಶಿಕ್ಷಕಿ ಬೀಜಾಡಿ-ಪಡು ಶಾಲೆ, ಡಾ. ಅಶೋಕ್ ಎಂ.ಡಿ. ಮಂಜುನಾಥ ಆಸ್ಪತ್ರೆ ಕುಂದಾಪುರ, ಸುರೇಖಾ ಹಿರಿಯ ಅಂಚೆಪಾಲಕರು ಕುಂದಾಪುರ ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡೂ ಶಾಖೆಯ ವತಿಯಿಂದ 12 ಸದಸ್ಯ ಗ್ರಾಹಕರನ್ನು ಗೌರವಿಸಲಾಯಿತು. ಸಮಾವೇಶದ ಅಂಗವಾಗಿ ಅದೃಷ್ಟ ಕೂಪನ್ ಮೂಲಕ 5 ಜನ ಗ್ರಾಹಕರಿಗೆ ಅದೃಷ್ಟ ಬಹುಮಾನ ನೀಡಲಾಯಿತು.
ಸಂಸ್ಥೆಯ ಉಪಾಧ್ಯಾಕ್ಷ ಎ. ಆನಂದ ಆಚಾರ್ಯ, ನಿರ್ದೇಶಕರಾದ ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ರಮೇಶ್ ರಾವ್ ಯು., ಚಂದ್ರಶೇಖರ್ ಎ.ಎಸ್. ಹಾಗೂ ಶಾಖೆಗಳ ಸಿಬ್ಬಂದಿಗಳು, ನಿವೃತ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೋಟೇಶ್ವರ ಶಾಖಾ ವ್ಯವಸ್ಥಾಪಕಿ ಪೂರ್ಣಿಮಾ ಎಸ್. ಆಚಾರ್ಯ ಸ್ವಾಗತಿಸಿ, ಕುಂದಾಪುರ ಶಾಖಾ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ವಂದಿಸಿದರು. ಅಂಬಿಕಾ ರಾಜ್ ಗೋಪಾಲ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







