ಪುತ್ತೂರು: ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದಡಿ ನಡೆದ ತಾಲೂಕು ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಪುರುಷರಕಟ್ಟೆಯ ಸರಸ್ವತಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಇಂಚರ ಜಿ. ಇವರು ಆಯ್ಕೆಯಾಗಿರುತ್ತಾರೆ. ವೀರಮಂಗಲ ಗುತ್ತುಮನೆ ನಿವಾಸಿ ವಿಶ್ವನಾಥ ಆರ್ ಮತ್ತು ವಿಜೇತಾ ಕೆ ದಂಪತಿಗಳ ಪುತ್ರಿಯಾಗಿರುತ್ತಾರೆ. ಇವರು ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ಸ್ವೀಕರಿಸಲಿದ್ದಾರೆ.
