





ಸ್ಮರಣಿಕೆ ರೂಪದಲ್ಲಿ ಹೂ ಕುಂಡ, ಅಂಕಣಕ್ಕೆ ಆಕರ್ಷಕ ಹೆಸರು
ಹಗ್ಗಜಗ್ಗಾಟ, ವಾಲಿಬಾಲ್ ಅಂಕಣಕ್ಕೆ ಮೆಚ್ಚುಗೆ : ಝಗಮಗಿಸಿದ ವಿದ್ಯುತ್ ದೀಪಾಲಂಕಾರ



ಪುತ್ತೂರು: ನೇಸರ ಯುವಕ ಮಂಡಲ ಇದರ ದಶಪ್ರಣತಿ ಪ್ರಯುಕ್ತ ನ.9 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಪುರುಷರ ವಿಭಾಗದ ಲೆವೆಲ್, ಸಿಂಗಲ್ ಗ್ರಿಪ್ ಮಾದರಿ, ಮಹಿಳಾ ವಿಭಾಗದ ಲೆವೆಲ್ ಮಾದರಿ ಹಗ್ಗಜಗ್ಗಾಟ ಹಾಗೂ ಗ್ರಾಮ ಗ್ರಾಮಗಳ ನಡುವಿನ ವಾಲಿಬಾಲ್ ಪಂದ್ಯಾಟ ಅಚ್ಚುಕಟ್ಟಾದ ವ್ಯವಸ್ಥೆಗೆ ಅತಿಥಿಗಳು, ಊರ ಪರವೂರಿನ ಬಂಧುಗಳು ಶ್ಲಾಘನೆ ವ್ಯಕ್ತಪಡಿಸಿದರು.






ಝಗಮಗಿಸಿದ ಅಂಕಣ
ಎರಡೂ ವಿಭಾಗದ ಹಗ್ಗಜಗ್ಗಾಟಕ್ಕೆ ನಿರ್ಮಿಸಿದ ಅಂಕಣವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಯೂಸೂಫ್ ಮುಕ್ಕೂರು, ರಫೀಕ್ ಸವಣೂರು ಮತ್ತು ಅವರ ತಂಡ ಶ್ರಮದಾನದ ಮೂಲಕ ಅಂಕಣಕ್ಕೆ ಬಣ್ಣ ಬಳಿದು ಅಂಕಣಕ್ಕೆ ಬಣ್ಣದ ರಂಗು ತುಂಬಿದರು. ಯುವಕ ಮಂಡಲದ ಸದಸ್ಯ ಶೀನ ಅನವುಗುಂಡಿ, ಐಸಿರಿ ತಂಡ ವಿದ್ಯುತ್ ದೀಪಗಳ ಬೆಳಕಿನ ಮೆರಗು ನೀಡಿತ್ತು.


ಆಕರ್ಷಕ ಹೆಸರು
ಸುಮಾರು 100 ಫೀಟ್ ಗೂ ಅಧಿಕ ಉದ್ಧದ ಅಂಕಣದ ಒಂದು ಭಾಗದಲ್ಲಿ ದಶಪ್ರಣತಿಯ ಸೂರ್ಯನ ಆಕಾರದ ಬ್ಯಾನರ್ ನೋಡುಗರ ಗಮನ ಸೆಳೆಯಿತು. ಇನ್ನೊಂದೆಡೆ ಸೂರ್ಯ ಎಂಬ ಅರ್ಥ ಬರುವ ತರಣಿ ಮತ್ತು ಭಾನು ಎಂಬ ಎರಡು ಹೆಸರನ್ನು ಅಂಕಣಕ್ಕೆ ಇಟ್ಟಿದ್ದುಆಕರ್ಷಕ ಹೆಸರು ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತಿತ್ತು. ಕ್ರೀಡಾಪಟುಗಳು, ತರಬೇತುದಾರರಿಗೆ ಮಾತ್ರ ಅಂಕಣಕ್ಕೆ ಪ್ರವೇಶ ನೀಡುವ ವ್ಯವಸ್ಥೆ ಇತ್ತು. ಇನ್ನು ವಿಶೇಷ ಆಹ್ವಾನಿತರಿಗೆ ಪ್ರತ್ಯೇಕ ಗ್ಯಾಲರಿಯ ವ್ಯವಸ್ಥೆ ಕಲ್ಪಿಸಿ ಸ್ಪರ್ಧೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ಹೂ ಕುಂಡದ ಗೌರವ
ನೇಸರ ಯುವಕ ಮಂಡಲವು ಪ್ರತಿ ಬಾರಿಯಂತೆ ಈ ಬಾರಿಯು ಅತಿಥಿಗಳಿಗೆ ಹೂ ಕುಂಡದ ಗೌರವ ನೀಡಿತ್ತು. ಜತೆಗೆ ದಶಪ್ರಣತಿಯ ಗೌರವ ಲೋಗೋದ ಶಾಲನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ, ಸ್ವಯಂಸೇವಕರಿಗೆ ಉಚಿತ ಗಂಜಿ ಚಟ್ನಿ ವ್ಯವಸ್ಥೆ ಕಲ್ಪಿಸಲಾಗಿತ್ತು.ಬೆಳಗ್ಗೆಯಿಂದ ಸಂಜೆಯ ತನಕ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿದರು.










