






ವಿಟ್ಲ : ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ (ರಿ) ಮತ್ತು ದ. ಕ. ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ) ಇವರ ಸಹಯೋಗದೊಂದಿಗೆ ನವೆಂಬರ್ 9 ರಂದು ನಟರಾಜ ವೇದಿಕೆ, ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇಲ್ಲಿ ನಡೆದ PTCA TROPHY , ಓಪನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ, ಆರ್ ಕ್ಯೂಬ್ ಚೆಸ್ ಅಕಾಡೆಮಿ ವಿಟ್ಲ ಇಲ್ಲಿಯ ವಿದ್ಯಾರ್ಥಿಗಳಾದ ಅಭಿನವ್ ರಾಮ್.ಎಸ್, ಅಮೃತ.ಎಸ್, ಮೋಕ್ಷಿತಾ, ಶೃತಿಕ್ ಇವರು ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ರೋಹಿತ್ ಕುಮಾರ್ ಟಿ ತರಬೇತಿ ನೀಡಿದ್ದಾರೆ. ಆರ್ ಕ್ಯೂಬ್ ಚೆಸ್ ಅಕಾಡೆಮಿಯ ಅಧ್ಯಕ್ಷರು ಮತ್ತು ಸಂಚಾಲಕರು ವಿಜೇತರನ್ನು ಅಭಿನಂದಿಸಿದರು.












