





ಅರಿಯಡ್ಕ ಉತ್ಸವ ಕಾಂಗ್ರೆಸ್ಗೆ ಶಕ್ತಿ ತುಂಬಲಿದೆ-ಶ್ರೀರಾಮ್ ಪಕ್ಕಳ


ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ನ.30ರಂದು ಕೌಡಿಚ್ಚಾರಿನಲ್ಲಿ ಅರಿಯಡ್ಕ ಉತ್ಸವ ನಡೆಯಲಿದ್ದು, ಅದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನ.13ರಂದು ಸಂಜೆ ಕೌಡಿಚ್ಚಾರ್ನಲ್ಲಿ ನಡೆಯಿತು.





ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ನೆ.ಮುಡ್ನೂರು ಗ್ರಾ.ಪಂ ಸದಸ್ಯ, ಕಾಂಗ್ರೆಸ್ ಮುಖಂಡ ಶ್ರೀರಾಮ್ ಪಕ್ಕಳ ಮಾತನಾಡಿ, ಅರಿಯಡ್ಕ ವಲಯ ಕಾಂಗ್ರೆಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಅರಿಯಡ್ಕ ಉತ್ಸವದ ಮೂಲಕ ಸರಕಾರದ, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ತಳಮಟ್ಟಕ್ಕೆ ತಿಳಿಸಿಕೊಡುವ ಕಾರ್ಯ ಮಾಡಲು ಹೊರಟಿರುವುದು ಉತ್ತಮ ವಿಚಾರ, ಇದು ಪಕ್ಷಕ್ಕೆ ಶಕ್ತಿ ನೀಡಲಿದೆ ಎಂದು ಹೇಳಿದರು. ಶಾಸಕ ಅಶೋಕ್ ರೈ ಅವರು ಮೆಡಿಕಲ್ ಕಾಲೇಜು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನಗಳನ್ನು ತರುತ್ತಿದ್ದಾರೆ, ಅವರು ಇನ್ನಷ್ಟು ವೇಗವಾಗಿ ಕೆಲಸ ಮಾಡಲು ಅವರಿಗೆ ನಾವು ಬೆನ್ನೆಲುಬಾಗಿ ನಿಂತು ಸಹಕಾರ ಕೊಡಬೇಕು ಎಂದು ಅವರು ಹೇಳಿದರು.
ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನ.೩೦ರಂದು ನಡೆಯುವ ಅರಿಯಡ್ಕ ಉತ್ಸವದಲ್ಲಿ ಅರಿಯಡ್ಕ ಗ್ರಾಮಕ್ಕೆ ಶಾಸಕರು ಕೊಟ್ಟ ಅನುದಾನಗಳ ಅನಾವರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಯೋರ್ವರಿಗೂ ತಲುಪಿಸಬೇಕೆನ್ನುವುದು ನಮ್ಮ ಗುರಿಯಾಗಿದೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿರುವ ಶಾಸಕರಿಗೆ ನಾವು ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು. ಅರಿಯಡ್ಕ ಉತ್ಸವ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಿಸಲಿದ್ದು ಆಗಮಿಸಿದವರಿಗೆ ಊಟೋಪಚಾರದ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ, ಮಾಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೆ.ಕೆ, ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಉಪಾಧ್ಯಕ್ಷ ವಿಠಲ ನಾಯ್ಕ್, ಅರಿಯಡ್ಕ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಿತ್ರಾ ಎನ್, ಬೂತ್ ಅಧ್ಯಕ್ಷರುಗಳಾದ ಸತೀಶ್ ಎಸ್, ಬೂತ್ ಅಧ್ಯಕ್ಷ ಚಂದ್ರಶೇಖರ್ ಮಣಿಯಾಣಿ ಕುರಿಂಜ ಹಾಗೂ ಬಶೀರ್ ಕೌಡಿಚ್ಚಾರ್, ಕಾಂಗ್ರೆಸ್ ಪ್ರಮುಖರಾದ ರಫೀಕ್ ದರ್ಖಾಸು, ವನರಾಜ್ ಸಿಆರ್ಸಿ, ಕೇಶವ ಶೇಕಮಲೆ, ಜ್ಞಾನಪ್ರಕಾಶ್ ಸಿಆರ್ಸಿ, ಲೋಕೇಶ್ ಶೆಟ್ಟಿ ಪಾಪೆಮಜಲು, ಶೀನಪ್ಪ ಶೇಕಮಲೆ, ಸಂತೋಷ್ ಕುಲಾಲ್ ಕೌಡಿಚ್ಚಾರ್, ಯತೀಶ್ ಪೂಜಾರಿ ಕಾವು, ಮೋನಪ್ಪ ಪೂಜಾರಿ, ಅರಿಯಡ್ಕ, ಸತ್ಯೇಂದ್ರನ್ ಸಿಆರ್ಸಿ, ಅಖಿಲೇಶ್ ಕುರಿಂಜ ಮತ್ತಿತರರು ಉಪಸ್ಥಿತರಿದ್ದರು.










