





ಪುತ್ತೂರು: ಮಾರುತಿ ಸುಜುಕಿ ಮತ್ತು ಡೀಲರ್, ಹಾರಾಡಿ ಭಾರತ್ ಆಟೋ ಕಾರ್ಸ್ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನ.15 ರಂದು “ಪ್ರಗತಿಯ ಹಬ್ಬ” ಎಂಬ ಡ್ರಾಯಿಂಗ್ ಸ್ಪರ್ಧೆಯು ಭಾರತ್ ಅಟೋಕಾರ್ಸ್ ಆವರಣದಲ್ಲಿ ನಡೆಯಿತು.


ಹಲವಾರು ಪುಟಾಣಿ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದು ಸಂಭ್ರಮಿಸಿದರು. ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಶಿವಕೀತಿ, ಸರ್ವೀಸ್ ಮ್ಯಾನೇಜರ್ ಆನಂದ ಮೂಲ್ಯ, ಟೀಮ್ ಲೀಡರ್ ಲಕ್ಷ್ಮೀಶ ಪೂಂಜ, ಜಯರಾಜ್, ಶೋಬಿತ್ , ಸಂತೋಷ್ ಕುಮಾರ್ ಸಹಿತ ಸಿಬ್ಬಂದಿಗಳು ಹಾಜರಿದ್ದರು.















