ಕೆಮ್ಮಾರ ಸರಕಾರಿ ಶಾಲೆಯಲ್ಲಿ ಮೆಟ್ರಿಕ್ ಮೇಳ ಹಾಗೂ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

0

ಉಪ್ಪಿನಂಗಡಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಶಾಲೆಯಲ್ಲಿ ಶಾಲಾ ಮಕ್ಕಳ ಮೆಟ್ರಿಕ್ ಮೇಳ ಕೆಮ್ಮಾರ ಸರಕಾರಿ ಶಾಲಾ ವಠಾರದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನಕರಾಜ್ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯಗುರು ಜಯಶ್ರೀ ಎಂ. ತೂಕ, ಎತ್ತರ, ಅಳತೆಯ ಮೂಲಕ ಗಣಿತದ ಪರಿಕಲ್ಪನೆಯೊಂದಿಗೆ ಗ್ರಾಹಕರ ಜೊತೆ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ಮೆಟ್ರಿಕ್ ಮೇಳ ಕಾರ್ಯಕ್ರಮ ಅಯೋಜನೆ ಮಾಡುತ್ತಿದೆ. ಈ ವಿಚಾರವಾಗಿ ಶಾಲಾ ಮಕ್ಕಳು ಬಹಳ ಉತ್ಸುಕತೆಯಿಂದ ಮೆಟ್ರಿಕ್ ಮೇಳವನ್ನು ಅಯೋಜಿಸಿ ಸದುಪಯೋಗ ಪಡಿಸಿಕೊಂಡಿದ್ದು ಶ್ಲಾಘನೀಯ ಎಂದರು.


ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ ಮಾತನಾಡಿ, ಶುಭ ಹಾರೈಸಿದರು.ಮಕ್ಕಳ ವ್ಯವಹಾರಿಕ ಕ್ಷಣಗಳನ್ನು ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮತ್ತು ಊರಿನ ನಾಗರಿಕರು ಸಹಕರಿಸಿದರು.


ಪೋಷಕರು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರುಗಳಿಗೆ ಡಿಸೆಂಬರ್ 20 ರಂದು ನಡೆಯುವ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ
ಕ್ರೀಡಾಕೂಟವನ್ನು ಅಯೋಜಿಸಲಾಯಿತು. ಪುರುಷರಿಗೆ ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಹಗ್ಗಜಗ್ಗಾಟ, ಗೋಣಿಚೀಲ ಓಟ ಜೊತೆಗೆ ಮಹಿಳೆಯರಿಗೆ, ಸಂಗೀತ ಕುರ್ಚಿ, ಶಟಲ್ ಬ್ಯಾಡ್ಮಿಂಟನ್, ತ್ರೋಬಾಲ್, ಸೇವ್ ಬಲೂನ್ ಸೇರಿದಂತೆ ಹಲವು ಪಂದ್ಯಾಕೂಟವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಹೇಮಂತ್ ಮೈತ್ತಲಿಕೆ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಅಸ್ಮಾ, ಸದಸ್ಯರಾದ ಪದ್ಮನಾಭ ಶೆಟ್ಟಿ, ವಾಮನ ಬರಮೇಲು, ಸುಮಯ್ಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜುನೈದ್, ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ ಬಡಿಲ, ಸೆಲಿಕತ್, ಅಶೋಕ್ ಕೊಯಿಲ, ಎಂ.ಜೆ.ಎಂ ಇದರ ಉಪಾಧ್ಯಕ್ಷರಾದ ನವಾಝ್ ಕೆಮ್ಮಾರ, ಯು.ಎಫ್.ಸಿ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಜಮಾಲ್ ಎಸ್‌.ಪಿ, ಇಲ್ಯಾಸ್, ಮುಸ್ತಫಾ ಬೆಂಗಳೂರು, ಅಝೀಝ್ ಜಿ, ಅಧ್ಯಾಪಕ ವೃಂದ, ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here