





ಪುತ್ತೂರು: ವೇದ ಸಂವರ್ಧನ ಪ್ರತಿಷ್ಠಾನ ಪುತ್ತೂರು ಆಯೋಜನೆಯಲ್ಲಿ ಸಪ್ತಶತೀ ಸಂಕುಲ ತಂಡ ಪ್ರಾರಂಭ ಮಾಡಿದ್ದು, ಪ್ರಪ್ರಥಮ ಸಪ್ತಶತೀ ಪಾರಾಯಣ ತರಬೇತಿಯ ತಂಡ ತರಬೇತಿ ನೀಡಿದ ಗುರುಗಳಾದ ಮಂಜುಳಗಿರಿ ವೇದಮೂರ್ತಿ ವೆಂಕಟರಮಣ ಭಟ್ ಅವರ ನಿವಾಸದಲ್ಲಿ ಗುರುವಂದನೆಗೈದರು.



ಮಂಜುಳಗಿರಿ ವೆಂಕಟರಮಣ ಭಟ್ ನಿವೃತ್ತ ಸಂಸ್ಕೃತ ಅಧ್ಯಾಪಕರಾಗಿದ್ದು, ನವೋದಯ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕರು, ಪ್ರತಿಷ್ಠಾನದ ಗೌರವ ಪ್ರಾಚಾರ್ಯರಾಗಿರುವ ವೇದಮೂರ್ತಿ ಬಡಜ ಜಯರಾಮ ಜೋಯಿಸರು ಉಪಸ್ಥಿತರಿದ್ದರು ಹಾಗೂ ಹವ್ಯಕ ವಲಯ ಅಧ್ಯಕ್ಷ
ವೇಣುಗೋಪಾಲ್ ಭಟ್ ಮತ್ತು ವೇದ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ಎಂ ಟಿ ಜಯರಾಮ್ ಭಟ್ ಭಾಗವಹಿಸಿದ್ದರು.





ಸುಮಾರು 70 ದಿನಗಳ ತರಬೇತಿ ಇಂದು ಒಂದು ಪ್ರಾಥಮಿಕ ಸಮಾಪನವಾಗಿದ್ದು, ಶ್ರೀ ಗುರುಗಳನ್ನ ಜಯರಾಮ ಜೋಯಿಸರು, ಹವ್ಯಕ ವಲಯ ಅಧ್ಯಕ್ಷರಾದ ವೇಣುಗೋಪಾಲ್ ಭಟ್ ಮತ್ತು ಎಂ ಟಿ ಜಯರಾಮ್ ಭಟ್ ಶಾಲು ಹೊಂದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಿದರು.
ವೇದಗಳಲ್ಲಿ ಬರುವ ಸ್ತೋತ್ರಗಳು, ಶ್ಲೋಕಗಳು ಹಾಗೂ ಪೂಜಾ ಕ್ರಮಗಳನ್ನು ಸಮಾಜದ ಎಲ್ಲ ವರ್ಗದವರಿಗೆ ಪಾರಾಯಣ ತರಬೇತಿ ಮಾಡುವ ಕುರಿತು ಸಭೆಯಲ್ಲಿ ಚಿಂತಿಸಲಾಯಿತು. ಶಿವಕುಮಾರ್ ಕಾಕೆಕೊಚ್ಚಿ ಶಿಬಿರದ ಅನುಭವದ ನೆನಪುಗಳನ್ನು ಹಂಚಿಕೊಂಡರು. ಶಿವರಾಮ ಭಟ್, ಬಾಳಿಕೆ ನಿವೃತ್ತ ಅಧ್ಯಾಪಕರು ಕಾರ್ಯಕ್ರಮ ನಿರ್ವಹಿಸಿದರು. ಮಣಿಲಾ ಮಹಾದೇವ ಶಾಸ್ತ್ರಿ ಮುನಿಯಂಗಳ ಕಾರ್ತಿಕೇಯ ಶರ್ಮ ಸುಬ್ರಹ್ಮಣ್ಯ ಭಟ್ , ಮಿತ್ತೂರು ಮಹೇಶ ಭಟ್ ಮುನಿಯಂಗಳ, ಮಾನಸ
ಹಾಗೂ ಸತ್ಯನಾರಾಯಣ ಸರ್ಪಂಗಳ, ಉದಯಕುಮಾರ್ ಪೆರೋಡಿ, ವೆಂಕಟರಮಣ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು. ಗುರುವಂದನೆಯೊಂದಿಗೆ ಸಭೆ, ನಾರಾಯಣ ಮೂರ್ತಿ ಶಿಬಿರಾರ್ಥಿ, ಅಧ್ಯಾಪಕರ ಅಭಿನಂದನೆಯೊಂದಿಗೆ ಮುಕ್ತಾಯಗೊಂಡಿತು.









