





ಪುತ್ತೂರು: ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ನೈತಾಡಿ ತಂಡದವರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಬಾಯಾರಿಕೆಯನ್ನು ತಣಿಸಲು ಮಜ್ಜಿಗೆ ಕೌಂಟರ್ ಅನ್ನು ತೆರೆಯಲಾಗಿತ್ತು.



ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕುರಾಯ ಹಾಗೂ ಹಾಲಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ದೀಪ ಬೆಳಗಿಸುವ ಮೂಲಕ ನ ಮಜ್ಜಿಗೆ ಕೌಂಟರ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹೇಶ್ ಬಿ.ಕಾವೇರಿಕಟ್ಟೆ, ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ ಕೋಲಾಡಿ, ದೇವಸ್ಥಾನದ ಗುಮಾಸ್ತ ಭರತ್, ನೈತ್ತಾಡಿ ತಂಡದ ಗಣೇಶ್ ಗೌಡ, ಯಮುನಾ, ಉಷಾ, ಚೈತ್ರಾ, ಸುಜಾತಾ, ಸತೀಶ್, ದೇವಪ್ಪ, ಮೋಹನ, ಬೇಬಿ ರೇಖಾ, ವೀಣಾ ಸಹಿತ ಇತರರು ಉಪಸ್ಥಿತರಿದ್ದರು.










