





ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಎಲ್ಐಸಿ ಉಡುಪಿ ವಿಭಾಗದ ವತಿಯಿಂದ ಬ್ಯಾರಿಕೇಡ್ ಹಾಗೂ ಬೃಹತ್ ಗಡಿಯಾರ ಕೊಡುಗೆಯಾಗಿ ನೀಡಲಾಯಿತು.


ಎಲ್ಐಸಿ ಹೈದರಾಬಾದ್ ವಿಭಾಗದ ಮ್ಯಾನೇಜರ್ ಪುನೀತ್ ಕುಮಾರ್ ಅವರು ಈ ಕೊಡುಗೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.





ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್.ಭಟ್, ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್, ಮಾರಾಟ ಅಧಿಕಾರಿ ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಸಂಪರ್ಕ ಶಾಖಾಧಿಕಾರಿ ಪ್ರಕಾಶ್ ಕುಮಾರ್, ಉಡುಪಿ ವಿಭಾಗದ ಶ್ಯಾಮ್ ಸುಂದರ್, ಅಭಿವೃದ್ಧಿ ಅಧಿಕಾರಿ ಉದಯಶಂಕರ್, ದೇವಳದ ಅರ್ಚಕ ಸುಬ್ರಹ್ಮಣ್ಯ ಉಪ್ಪಾರ್ಣ ಉಪಸ್ಥಿತರಿದ್ದರು.
ದೇವಳದ ವತಿಯಿಂದ ಪುನೀತ್ ಕುಮಾರ್ ಹಾಗೂ ಗಣಪತಿ ಎನ್.ಭಟ್ ಅವರಿಗೆ ಗೌರವ ಸಲ್ಲಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ದೇವಳದ ಪರವಾಗಿ ಕೃತಜ್ಞತೆ ಸಲ್ಲಿಸಿದರು.










