




ಉಪ್ಪಿನಂಗಡಿ: ಕೆಎಸ್ಸಾರ್ಟಿಸಿಯ ಟಿಕೇಟ್ ಚೆಕ್ಕಿಂಗ್ನವರ ಮೇಲೆ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನೋರ್ವ ಹಲ್ಲೆ ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.



ಮಂಗಳೂರಿನಿಂದ ಉಪ್ಪಿನಂಗಡಿಗೆ ಬಂದ ಬಸ್ಗೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಟಿಕೇಟ್ ಚೆಕ್ಕಿಂಗೆಂದು ಟಿ.ಸಿ.ಗಳು ಹತ್ತಿದ್ದು, ಈ ಸಂದರ್ಭ ನಿರ್ವಾಹಕ ಒಂದು ಟಿಕೇಟ್ ನೀಡದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕೇಸು ದಾಖಲಿಸಲು ಮುಂದಾದಾಗ ಬಸ್ ನಿರ್ವಾಹಕ ಮತ್ತು ಟಿ.ಸಿ.ಗಳ ಮಧ್ಯೆ ಮಾತಿನ ಚಕಮಕಿ ನಡೆದು, ನಿರ್ವಾಹಕ ಟಿ.ಸಿ.ಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಬಂದು ನಿರ್ವಾಹಕನನ್ನು ವಶಕ್ಕೆ ಪಡೆದಿದ್ದಾರೆ. ತಾನು ಒಂದು ಟಿಕೇಟ್ ನೀಡದಿರುವುದಕ್ಕೆ ಟಿ.ಸಿ.ಗಳು ಐದು ಕೇಸ್ ಮಾಡಲು ಮುಂದಾಗಿದ್ದರು. ಇದನ್ನು ನಾನು ಪ್ರತಿಭಟಿಸಿದಾಗ ಈ ರೀತಿಯಾಗಿದೆ ಎಂದು ಬಸ್ ನಿರ್ವಾಹಕನಿಂದ ಆರೋಪ ಕೇಳಿ ಬಂದಿದೆ.














