




ನಿಮ್ಮ ಭವಿಷ್ಯ ರೂಪಿಸಲು ನಮ್ಮ ಸಂಸ್ಥೆ ನಿಮ್ಮೊಂದಿಗಿದೆ-ವಂ|ಲಾರೆನ್ಸ್ ಮಸ್ಕರೇನಸ್



ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಮಾಯ್ ದೇ ದೇವುಸ್ ಚರ್ಚ್ ವಠಾರದಲ್ಲಿರುವ ಮಾಯ್ ದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ ಹಾಗೂ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಡಿ.2ರಿಂದ 4ರವರೆಗೆ ನಡೆಯಲಿದ್ದು ಇದರ ಪ್ರಯುಕ್ತ ಡಿ.1ರಂದು ಬೆಳಿಗ್ಗೆ ಚರ್ಚ್ನಲ್ಲಿ ದಿವ್ಯ ಬಲಿಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.






ಬೆಳಿಗ್ಗೆ 9.15ಕ್ಕೆ ಚರ್ಚ್ನಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ಪಂಜ ಸಂತ ರಿಟಾ ಚರ್ಚ್ನ ಪ್ರಧಾನ ಧರ್ಮಗುರು ವಂ|ಮೆಲ್ವಿನ್ ಜಾನ್ ಡಿಸೋಜ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಕೀರ್ತಿ ಆಂಟನಿ ಪತ್ರಾವೋರವರಿಗೆ ಸಲ್ಲುತ್ತದೆ. ಧ್ವಜಾರೋಹಣದೊಂದಿಗೆ ವಾರ್ಷಿಕೋತ್ಸವದ ಸಂತಸ ಹಂಚಿಕೊಳ್ಳಲಿದ್ದೇವೆ. ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ನೀವು ಕಾತರರಾಗಿದ್ದೀರಿ. ನಿಮ್ಮ ಭವಿಷ್ಯ ರೂಪಿಸಲು ನಮ್ಮ ಸಂಸ್ಥೆ ನಿಮ್ಮೊಂದಿಗಿದೆ ಎಂದು ಹೇಳಿ ದೇವರ ಕೃಪೆ ನಿಮ್ಮ ಮೇಲೆ ಇರಲಿ ಎಂದು ಶುಭಹಾರೈಸಿದರು.
ಮಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೊಸ್ತ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹ್ಯಾರಿ ಡಿ.ಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ, ಮಾಯ್ ದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ರಮ್ಲತ್, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸಾಲಿನ್ ಲೋಬೋ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ವೇತಾರವರು ಉಪಸ್ಥಿತರಿದ್ದರು. ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಸನಿಹ ಸ್ವಾಗತಿಸಿ ಮೈಥಿಲಿ ವಂದಿಸಿದರು.
ಬಹುಮಾನ ವಿತರಣೆ:
ಧ್ವಜಾರೋಹಣ ಬಳಿಕ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಹುಮಾನ ವಿತರಣೆ ನಡೆಯಿತು. ಪಂಜ ಸಂತ ರಿಟಾ ಚರ್ಚ್ನ ಪ್ರಧಾನ ಧರ್ಮಗುರು ವಂ|ಮೆಲ್ವಿನ್ ಜಾನ್ ಡಿಸೋಜ ಮಾತನಾಡಿ ಶುಭಹಾರೈಸಿದರು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್, ಮಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೊಸ್ತ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹ್ಯಾರಿ ಡಿ.ಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ರೂಪಿಕಾ ರೈ, ಪ್ರೀತಿ ಡಿಸೋಜಾ, ಪ್ರೆಸಿಲ್ಲ ಮಿನೇಜಸ್, ವೀಣಾ ಪಿಂಟೋ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸುನಿತಾ ಮಸ್ಕರೇನಸ್ ವಂದಿಸಿ ಲವೀನಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.
ಇಂದು ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ
ಡಿ.2ರಂದು ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ಅಪರಾಹ್ನ ೩ ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು ಮುಖ್ಯಅತಿಥಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿ, ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ನಿಖಿತಾ ಜೇಮ್ಸ್, ಗೌರವ ಉಪಸ್ಥಿತರಾಗಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೊಸ್ತ, ಮಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೋ ಭಾಗವಹಿಸಲಿದ್ದಾರೆ. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
“ಚೆನ್ನಾಗಿ ಕಲಿತು ತಂದೆ ತಾಯಿಯರಿಗೆ ಗೌರವ ಕೊಡಬೇಕು”-ಶಾಸಕ ಅಶೋಕ್ ಕುಮಾರ್ ರೈರವರಿಂದ ಶುಭಹಾರೈಕೆ
ಬಹುಮಾನ ವಿತರಣಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಶಾಸಕ ಅಶೋಕ್ ಕುಮಾರ್ ರೈರವರು ಪ್ರಾರ್ಥನೆ ಸಲ್ಲಿಸಲೆಂದು ಚರ್ಚ್ಗೆ ಆಗಮಿಸಿದ್ದರು. ಪ್ರಾರ್ಥನೆ ಸಲ್ಲಿಸಿ ಬಳಿಕ ಸಭಾಕಾರ್ಯಕ್ರಮದ ವೇದಿಕೆಗೆ ಆಗಮಿಸಿ ಮಾತನಾಡಿದ ಶಾಸಕರು ನೀವು ಒಳ್ಳೆಯ ಶಾಲೆಯಲ್ಲಿ ಕಲಿಯುತ್ತಿದ್ದೀರಿ. ಚೆನ್ನಾಗಿ ಕಲಿತು ತಂದೆ ತಾಯಿಯರಿಗೆ ಗೌರವ ಕೊಡಬೇಕು. ಡಾಕ್ಟರ್, ಇಂಜಿನಿಯರ್, ಐಎಎಸ್ ಆಫೀಸರ್ ಆಗಬೇಕು. ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಆಗಿದೆ. ಅದಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿ ಶುಭಹಾರೈಸಿದರು.









