ಪುತ್ತೂರು:ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಿದಾನಂದರವರ ಸಹಪಾಠಿ ಅಜಿತ್ ಕುಮಾರ್ ರವರು ಸುಮಾರು ರೂ.15 ಸಾವಿರ ಮೌಲ್ಯದ 3 ಕ್ವಿಂಟಾಲ್ ಅಕ್ಕಿ ಕೊಡುಗೆಯಾಗಿ ನೀಡಿದರು.
ಬಳಿಕ ಮಾತನಾಡಿದ ಅಜಿತ್ ಕುಮಾರ್ ರವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ ಬಗ್ಗೆ ಶ್ಲಾಘಿಸಿ ಮುಂದಿನ ದಿನಗಳಲ್ಲಿಯೂ ಸಹಕಾರ ನೀಡಲಿದ್ದೇನೆ ಎಂದರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ನಮ್ಮ ಕಾಲೇಜಿನಲ್ಲಿ ಆರಂಭವಾದ ಆರಂಭವಾದ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ ಅನೇಕ ದಾನಿಗಳ ಸಹಕಾರದಿಂದ ಮುಂದುವರೆಯುತ್ತಿದ್ದು ಮೂರು ಕ್ವಿಂಟಾಲ್ ಅಕ್ಕಿ ನೀಡಿ ಸಹಕರಿಸಿದ ಅಜಿತ್ ಕುಮಾರ್ ರವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬರವರು ಕೃತಜ್ಞತೆ ಸಲ್ಲಿಸಿರುತ್ತಾರೆ.
