




ಪುತ್ತೂರು: ಪಾರ್ಲಿಮೆಂಟ್ ಭವನದ ರೂಪದಲ್ಲಿ ನಿರ್ಮಾಣಗೊಂಡು ತಾಲೂಕಿನಲ್ಲೇ ಭವ್ಯವಾದ ಗ್ರಾಮ ಪಂಚಾಯತ್ ಎಂದೇ ಕರೆಸಿಕೊಂಡಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಕಛೇರಿ ಕಟ್ಟಡಕ್ಕೆ ಇದೀಗ ಮತ್ತಷ್ಟು ಮೆರುಗು ಹೆಚ್ಚಲಿದೆ. ಕಛೇರಿ ಕಟ್ಟಡದ ಮೇಲಂತಸ್ತಿನಲ್ಲಿ ಸಭಾ ಭವನ ಹಾಗೂ ಗ್ರಂಥಾಲಯ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸಭಾ ಭವನ ಹಾಗೂ ಗ್ರಂಥಾಲಯ ಕಛೇರಿ ಕಟ್ಟಡ ನಿರ್ಮಾಣಗೊಂಡರೆ ಕಛೇರಿ ಕಟ್ಟಡಕ್ಕೆ ಮತ್ತಷ್ಟು ಮೆರುಗು ಬರಲಿದೆ.




ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ಗೆ ಸೂಕ್ತವಾದ ಕಟ್ಟಡವಿಲ್ಲದೆ ಇದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಆಗಮಿಸಿದ್ದ ಅವಿನಾಶ್ ಬಿ.ಆರ್ರವರ ಅವಿರತ ಶ್ರಮ ಹಾಗೂ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಆಡಳಿತ ಮಂಡಳಿ ಸದಸ್ಯರ ಸಹಕಾರದೊಂದಿಗೆ ಸುಮಾರು 52 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮ ಪಂಚಾಯತ್ನ ನೂತನ ಕಟ್ಟಡವು ಸಂಪೂರ್ಣವಾಗಿ ಪಾರ್ಲಿಮೆಂಟ್ ಭವನದ ರೀತಿಯಲ್ಲಿದೆ. ನವೀನ್ ಪ್ರಸಾದ್ ಕೈಕಾರರವರು ಗುತ್ತಿಗೆದಾರರಾಗಿ ಈ ಕಟ್ಟಡ ನಿರ್ಮಾಣದ ಜವಜ್ದಾರಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ಮೇಲಂತಸ್ತಿನಲ್ಲಿ ಗ್ರಂಥಾಲಯ ಕಛೇರಿ ಹಾಗೂ ಪಂಚಾಯತ್ ಸಾಮಾನ್ಯ ಸಭೆ, ಮೀಟಿಂಗ್ ಇತ್ಯಾದಿಗಳನ್ನು ನಡೆಸಲು ಒಂದು ಸಭಾ ಭವನ ನಿರ್ಮಾಣ ಮಾಡಬೇಕು ಎಂದು ನಿರ್ಣಯಿಸಲಾಗಿತ್ತು ಇದೇ ಸಂದರ್ಭದಲ್ಲಿ ಅಂದಿನ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ರೂ.10 ಲಕ್ಷ ಅನುದಾನದ ಭರವಸೆ ಕೂಡ ನೀಡಿದ್ದರು. ಆದರೆ ಅನುದಾನ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು.ಆ ನಂತರದ ದಿನಗಳಲ್ಲಿ ಅವಿನಾಶ್ ಬಿ.ಆರ್.ರವರು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರವರ ಆಪ್ತ ಸಹಾಯಕ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು.





ವರ್ಷಗಳ ಬಳಿಕ ಅವಿನಾಶ್ ಬಿ.ಆರ್ರವರು ಮತ್ತೆ ಒಳಮೊಗ್ರು ಗ್ರಾಮ ಪಂಚಾಯತ್ಗೆ ಪಿಡಿಒ ಆಗಿ ನಿಯೋಜನಗೊಂಡ ಬೆನ್ನಲ್ಲೆ ಅವರು ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಆಡಳಿತ ಮಂಡಳಿ ಸದಸ್ಯರ ಸಹಕಾರ ಪಡೆದುಕೊಂಡು ಪಂಚಾಯತ್ ಮೇಲಂತಸ್ತಿನ ಕಟ್ಟಡ ಕಾಮಗಾರಿ ಬಗ್ಗೆ ಮುತುವರ್ಜಿ ವಹಿಸಿಕೊಂಡರು. ಈ ವೇಳೆಗಾಗಲೇ ರಾಜ್ಯದಲ್ಲಿ ಸರಕಾರದ ಬದಲಾವಣೆ ಕೂಡ ಆಗಿತ್ತು ಕರಾವಳಿ ಪ್ರಾಧಿಕಾರದ ಅನುದಾನ ಕೂಡ ಪೆಡ್ಡಿಂಗ್ ಆಗಿತ್ತು. ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸಿದ್ದು ಅಲ್ಲದೆ ಶಾಸಕ ಅಶೋಕ್ ಕುಮಾರ್ ರೈಯವರ ಮೂಲಕ ಮತ್ತೆ ಈ ಅನುದಾನ ಬಿಡುಗಡೆಗೊಳ್ಳುವಂತೆ ಮಾಡಲಾಯಿತು. ಅಲ್ಲದೆ ಲೋಕಸಭಾ ಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟರವರಲ್ಲಿ ಮನವಿ ಮಾಡಿಕೊಂಡು ಅನುದಾನ ನೀಡುವಂತೆ ಕೇಳಿಕೊಂಡಿದ್ದರು. ಈ ವೇಳೆಯಲ್ಲೆ ಮತ್ತೆ ಅವಿನಾಶ್ ಬಿ.ಆರ್.ರವರು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ರವರ ಆಪ್ತ ಸಹಾಯಕ ಕಾರ್ಯದರ್ಶಿಯಾಗಿ ನಿಯೋಜನಗೊಂಡರು. ಕರಾವಳಿ ಪ್ರಾಧಿಕಾರದ 10 ಲಕ್ಷ ರೂ. ಸಂಸದರ ಅನುದಾನ ರೂ.10 ಲಕ್ಷ ಹಾಗೂ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿಯವರ ಪ್ರದೇಶ ಅಭಿವೃದ್ಧಿ ಯೋಜನೆಯ ಅನುದಾನ ರೂ.3 ಲಕ್ಷವನ್ನು ಕೂಡ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡು ಈಗಾಗಲೇ ಒಟ್ಟು 23 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರ ನವೀನ್ ಪ್ರಸಾದ್ ಕೈಕಾರರವರೇ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಬೇಕಿದೆ ಅನುದಾನ…
ಒಟ್ಟು 1900 ಚದರ ಅಡಿ ವಿಸ್ತೀರ್ಣದ ಮೇಲಂತಸ್ತಿನಲ್ಲಿ 12೦೦ ಚದರ ಅಡಿ ವಿಸ್ತೀರ್ಣದ ಸಭಾ ಭವನ ಹಾಗೂ 75೦ ಚದರ ಅಡಿ ವಿಸ್ತೀರ್ಣದ ಗ್ರಂಥಾಲಯ ಕಛೇರಿ ನಿಮಾ|ಣಗೊಳ್ಳಲಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಒಟ್ಟು 23 ಲಕ್ಷ ರೂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಬಹಳಷ್ಟು ಅನುದಾನದ ಅವಶ್ಯಕತೆ ಇದೆ.
ಆಲ್ ಕ್ರೆಡಿಟ್ ಗೋಸ್ಟು ಅವಿನಾಶ್ ಬಿ.ಆರ್
ಒಳಮೊಗ್ರು ಗ್ರಾಮ ಪಂಚಾಯತ್ನ ನೂತನ ಕಟ್ಟಡ ನಿರ್ಮಾಣ ಕಾರ್ಯದಿಂದ ಹಿಡಿದು ಇದೀಗ ಮೇಲಂತಸ್ತಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನ, ಗ್ರಂಥಾಲಯ ಕಛೇರಿ ಕಟ್ಟಡ ಈ ಎಲ್ಲದರ ಹಿಂದಿನ ಶಕ್ತಿ ಪಿಡಿಓ ಆಗಿದ್ದ ಅವಿನಾಶ್ ಬಿ.ಆರ್ರವರು ಆದ್ದರಿಂದ ಈ ಎಲ್ಲಾ ಅಭಿವೃದ್ಧಿಗಳ ಶ್ರೆಯಸ್ಸು ಪಿಡಿಓ ಅವಿನಾಶ್ ಬಿ.ಆರ್ರವರಿಗೆ ಸಲ್ಲಬೇಕಾಗುತ್ತದೆ. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಸದಸ್ಯರುಗಳು, ಸಿಬ್ಬಂದಿ ವರ್ಗ ಮತ್ತು ಈಗಿನ ಪಿಡಿಒ ಸುರೇಶ್ ಕೆ.ರವರ ಸಹಕಾರವನ್ನು ಇಲ್ಲಿ ಉಲ್ಲೇಖ ಮಾಡಲೇಬೇಕಾಗುತ್ತದೆ.
‘ ಕರಾವಳಿ ಪ್ರಾಧಿಕಾರದ ರೂ.10 ಲಕ್ಷ, ಸಂಸದರ ಅನುದಾನ ರೂ.10ಲಕ್ಷ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನ ರೂ.3 ಲಕ್ಷವನ್ನು ಬಳಸಿಕೊಂಡು ಒಟ್ಟು 23 ಲಕ್ಷ ರೂ.ವೆಚ್ಚದಲ್ಲಿ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೂಡ ಬಹಳಷ್ಟು ಅನುದಾನದ ಅವಶ್ಯಕತೆ ಇದೆ.’
ಸುರೇಶ್ ಕೆ,
ಪ್ರಭಾರ ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ






