




ಪುತ್ತೂರು: ಇತ್ತೀಚೆಗೆ ಭಕ್ತಕೋಡಿಯಲ್ಲಿ ನಡೆದ ಭಾರತೀಯ ಜೀವವಿಮಾ ನಿಗಮದ ಮುಖ್ಯ ಜೀವವಿಮಾ ಸಲಹೆಗಾರ ಜಿ.ಕೆ.ಪ್ರಸನ್ನಾ ಅವರ ಮಾಲಕತ್ವದ ಆರಾಧ್ಯ ಸಂಕೀರ್ಣದ ಲೋಕಾರ್ಪಣಾ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.





ಡಾ.ಸೀತಾರಾಮ ಭಟ್ ಕಲ್ಲಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃತಜ್ಞತಾ ಕಾರ್ಯಕ್ರಮದಲ್ಲಿ ಷಣ್ಮುಖ ಯುವಕ ಮಂಡಲದ ಗೌರವ ಅಧ್ಯಕ್ಷ ಎಸ್.ಡಿ.ವಸಂತ, ರವಿಶಂಕರ ಬೆಟ್ಟಂಪಾಡಿ, ಮುನ್ನ ಎಲೆಕ್ಟ್ರಿಕಲ್ಸ್ನ ಕೃಷ್ಣಪ್ರಸಾದ್, ಡಾ.ವೆಂಕಟೇಶ್ ಮಂಜುಳಗಿರಿ ಅವರನ್ನು ಗೌರವಿಸಲಾಯಿತು.





ಈ ಸಂದರ್ಭದಲ್ಲಿ ವೆಂಕಟ್ರಮಣ ಭಟ್ ಮಂಜುಳಗಿರಿ, ಶ್ರೀನಿಧಿ ಬೋರ್ವೆಲ್ಸ್ನ ಗೋಪಾಲಕೃಷ್ಣ ಪಿ., ಶ್ರೀನಿವಾಸ್ ಹೆಚ್ಪಿ, ಕೇಶವಚಂದ್ರ ಭಟ್, ಶಶಿಧರ್ ಭಟ್ ನೆಟ್ಟಾರು ಹಾಗೂ ಷಣ್ಮುಖ ಯುವಕ ಮಂಡಲದ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.
ಆರಾಧ್ಯ ಸಂಕೀರ್ಣದ ಮಾಲಕ ಜಿ.ಕೆ.ಪ್ರಸನ್ನ ಮತ್ತು ಮನೆಯವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.







