




ವರದಿ: ಯುಪಿರೈ ನಡುಬೈಲು
ಕ್ಯಾಂಪ್ಕೋ ಮತ್ತು ಮಾಸ್ ಸಂಸ್ಥೆಗಳ ನಡುವೆ ಸ್ಪರ್ಧೆ ಇಲ್ಲ- ಸವಣೂರು ಸೀತಾರಾಮ ರೈ
ಪುತ್ತೂರು: ಅಡಿಕೆ ವ್ಯವಹಾರಕ್ಕೆ ಕ್ಯಾಂಪ್ಕೋ ಮತ್ತು ಮಾಸ್ ಬಿಟ್ಟರೆ ಬೇರೆ ಯಾವುದೇ ಸಹಕಾರಿ ಸಂಸ್ಥೆಗಳು ಇಲ್ಲ ಎಂದು ಮಾಸ್ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಹೇಳಿದರು.




ದ. 9ರಂದು ಉಬರಡ್ಕಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ (ಮಾಸ್) ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು ಮಾಸ್ ಮತ್ತು ಕ್ಯಾಂಪ್ಕೋ ನಡುವೆ ಯಾವುದೇ ಸ್ಪರ್ಧೆ ಇಲ್ಲ, ಎರಡೂ ಸಂಸ್ಥೆಗಳು ರೈತರ ಹಿತಕ್ಕಾಗಿ ದುಡಿಯುತ್ತಿದೆ ಎಂದು ಅವರು ಹೇಳಿದರು. ಉಬರಡ್ಕ- ಮಿತ್ತೂರು ಭಾಗದವರು ಮಾರಾಟ ಮಾಡುತ್ತಿದ್ದಾರೆ, ಇದರಿಂದ ಅವರಿಗೆ ತುಂಬಾ ಸಮಯ ವ್ಯರ್ಥವಾಗುತ್ತಿದೆ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಉಬರಡ್ಕ-ಮಿತ್ತೂರು ಸೊಸೈಟಿಯಲ್ಲಿ ಮಾಸ್ ನಿಂದ ಅಡಿಕೆ ಖರೀದಿ ಕೇಂದ್ರ ಪ್ರಾರಂಭ ಮಾಡಿದ್ದೇವೆ, ನಾವು ಅಡಿಕೆಗೆ ಒಳ್ಳೆಯ ಧಾರಣೆಯನ್ನು ನೀಡುತ್ತೇವೆ, ಪ್ರತಿದಿನ ನಾವು ನೀಡುವ ಅಡಿಕೆ ಧಾರಣೆಯು ‘ಸುದ್ದಿ’ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ತಿಳಿಸಿದ ಸೀತಾರಾಮ ರೈ ಯವರು ಮಾಸ್ ಸಂಸ್ಥೆಗೆ ಮಂಗಳೂರಿನಲ್ಲಿ ಸ್ವಂತ ನಿವೇಶನ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಸ್ ಅಡಿಕೆ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಲಿದ್ದೇವೆ ಎಂದರು.






ಅಡಿಕೆ ಕೃಷಿಕರು ಸಹಕಾರ ನೀಡಬೇಕು- ದಾಮೋದರ ಗೌಡ
ಉಬರಡ್ಕ ಮಿತ್ತೂರು ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸೊಸೈಟಿಯಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿದ್ದೇವೆ. ಇದಕ್ಕೆ ಈ ಭಾಗದ ಎಲ್ಲಾ ಅಡಿಕೆ ಕೃಷಿಕರು ಸಹಕಾರವನ್ನು ನೀಡಬೇಕು ಎಂದರು.

ಸನ್ಮಾನ: ‘ಸಹಕಾರರತ್ನ’ ಪ್ರಶಸ್ತಿ ಪುರಸ್ಕೃತ ಪಿ.ಸಿ.ಜಯರಾಮರವರನ್ನು ಮಾಸ್ ಸಂಸ್ಥೆಯ ವತಿಯಿಂದ ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಪಿ.ಸಿ.ಜಯರಾಮರವರು ಮಾತನಾಡಿ ಸವಣೂರು ಸೀತಾರಾಮ ರೈ ಅಧ್ಯಕ್ಷರಾದ ಬಳಿಕ ಮಾಸ್ ಸಂಸ್ಥೆಯು ಶರವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎಂದರು.
ನೂರು ವರ್ಷ ಸುಖವಾಗಿ ಬಾಳಲಿ- ನಿತ್ಯಾನಂದ ಮುಂಡೋಡಿ:
ಮಾಸ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಮುಂಡೋಡಿಯವರು ಅಡಿಕೆ ಕತ್ತರಿಸಿ ನೂತನ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಮಾಸ್ ಸಂಸ್ಥೆಗೆ ಹೊಸ ಚೈತನ್ಯ ನೀಡಿದವರು ಸವಣೂರು ಸೀತಾರಾಮ ರೈ ಅವರು, ಅವರಿಗೆ ಶ್ರೀ ದೇವರು ಒಳ್ಳೆಯ ಆರೋಗ್ಯವನ್ನು ಕರುಣಿಸಲಿ, ಅವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ಹೇಳಿದರು.

ಸೀತಾರಾಮ ರೈ, ನಿತ್ಯಾನಂದ ಅವರಿಗೆ ಸನ್ಮಾನ: ಸಹಕಾರತ್ನ ಪುರಸ್ಕೃತರಾದ ಸವಣೂರು ಸೀತಾರಾಮ ರೈ ಮತ್ತು ನಿತ್ಯಾನಂದ ಮುಂಡೋಡಿಯವರನ್ನು ಉಬರಡ್ಕ-ಮಿತ್ತೂರು ಸೊಸೈಟಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಉಬರಡ್ಕ ನರಸಿಂಹ ಶಾಸ್ತಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪಗೌಡ, ಉಬರಡ್ಕ ಮಿತ್ತೂರು ಜೋಡುದೈವಗಳ ದೈವಸ್ಥಾನದ ಮೊಕ್ತೇಸರ ವೆಂಕಟ್ರಮಣ ಗೌಡ ಕೆದಂಬಾಡಿ, ಸುಳ್ಯ ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಉಬರಡ್ಕರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು.
ಎಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ರತನ್ ಕೆ.ಎಸ್., ಉಬರಡ್ಕ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಭಟ್ ಸ್ವಾಗತಿಸಿ, ಉಬರಡ್ಕ-ಮಿತ್ತೂರು ಸೊಸೈಟಿ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ ವಂದಿಸಿದರು. ನಿರ್ದೇಶಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಾಸ್ ಸಂಸ್ಥೆಯ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ, ಲೋಕೇಶ್ ಕಾರ್ಯಕ್ರಮದಲ್ಲಿ ಸಹಕರಿಸಿದರು.





