




ಹಲವು ದಶಕಗಳನ್ನು ಕಾಣುವ ಭಾಗ್ಯ ಶಾಲೆಗೆ ಸಿಗಲಿ-ಮೊ|ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ
ಶಾಲೆಯು ಜ್ಞಾನ, ಸೃಜನಶೀಲತೆಯನ್ನೂ ಬೆಳೆಸುವ ಜಾಗ-ವಂ|ಆಲ್ಫ್ರೆಡ್ ಜೆ. ಪಿಂಟೋ
ಈಗಿನ ಮಕ್ಕಳು ಕಲಿಕೆ, ಗ್ರಹಿಕೆಯಲ್ಲಿ ಮುಂದೆ ಇದ್ದಾರೆ-ವಂ| ಸ್ಟ್ಯಾನಿ ಪಿಂಟೋ
ಮಕ್ಕಳು ಕುಟುಂಬಕ್ಕೆ, ಶಾಲೆಗೆ, ಸಮಾಜಕ್ಕೆ ಆಸ್ತಿ-ವಂ|ಲಾರೆನ್ಸ್ ಮಸ್ಕರೇನಸ್



ಪುತ್ತೂರು: ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ದರ್ಬೆ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ 10ನೇ ವರ್ಷದ ವಾರ್ಷಿಕೋತ್ಸವ ಡಿ.10ರಂದು ಸಂತ ಫಿಲೋಮಿನಾ ಎಸ್ಜೆಎಮ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷರಾದ ಮೊ|ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.






ಶಾಲೆಯು ಜ್ಞಾನ, ಸೃಜನಶೀಲತೆಯನ್ನೂ ಬೆಳೆಸುವ ಜಾಗ:
ಮುಖ್ಯ ಅತಿಥಿ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಸ್ಥಾಪಕ, ಕಟೀಲು ಸಂತ ಜಾಕೋಬ್ ಚರ್ಚ್ನ ಧರ್ಮಗುರು ವಂ|ಆಲ್ಫ್ರೆಡ್ ಜೆ. ಪಿಂಟೋ ಮಾತನಾಡಿ ಶಾಲೆ ಆರಂಭಿಸುವ ದೃಷ್ಟಿಕೋನ 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಒಂದು ಸರಳ ಕನಸು ನನಸಾಗಿದೆ. ನಮ್ಮ ವಿದ್ಯಾರ್ಥಿಗಳು ಜ್ಞಾನವನ್ನು ಮಾತ್ರವಲ್ಲದೆ ಸೃಜನಶೀಲತೆಯನ್ನೂ ಬೆಳೆಸಲು ಒಂದು ಜಾಗವನ್ನು ಸೃಷ್ಟಿಸುವುವ ಉದ್ಧೇಶ ಈಡೇರಿದೆ. ನಿಮ್ಮ ಪ್ರಯತ್ನ ಶಾಲೆಯನ್ನು ಉತ್ತಮಗೊಳಿಸುತ್ತದೆ. ಭವಿಷ್ಯದಲ್ಲಿಯೂ ಇದೇ ರೀತಿ ಪ್ರಯತ್ನ ಮುಂದುವರಿಯಲಿ ಎಂದು ಹೇಳಿ ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಸಿಗಲಿ ಎಂದು ಹಾರೈಸಿ ಶಾಲೆ ಸ್ಥಾಪಿಸಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಈಗಿನ ಮಕ್ಕಳು ಕಲಿಕೆ, ಗ್ರಹಿಕೆಯಲ್ಲಿ ಮುಂದೆ ಇದ್ದಾರೆ:
ಮುಕ್ಕ ಹೋಲಿ ಸ್ಪಿರಿಟ್ ಚರ್ಚ್ನ ಧರ್ಮಗುರು ವಂ| ಸ್ಟ್ಯಾನಿ ಪಿಂಟೋ ಮಾತನಾಡಿ ವಂ|ಆಲ್ಫ್ರೆಡ್ ಜೆ. ಪಿಂಟೋರವರು ಇಲ್ಲಿ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಈಗಿನ ಮಕ್ಕಳು ಕಲಿಕೆ ಮತ್ತು ಗ್ರಹಿಕೆಯಲ್ಲಿ ತುಂಬಾ ಬುದ್ಧಿವಂತರಿದ್ದಾರೆ. ಯೋಚನಾ ಶಕ್ತಿ ಹೆಚ್ಚಿರುತ್ತದೆ. ಇದ್ನನು ಬೇಕಾದ ರೀತಿಯಲ್ಲಿ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಮೊಬೈಲ್ ನ್ನು ಮಕ್ಕಳಿಂದ ದೂರವಿರಿಸಿ. ಒಂದು ದಶಕದಲ್ಲಿ ಈ ಶಾಲೆ ಬೆಳವಣಿಗೆ ಕಂಡಿದೆ. ಈ ಶಾಲೆಯ ಮೇಲೆ ನಂಬಿಕೆ ಇಟ್ಟಿದ್ದೀರಿ. ಮುಂದಿನ ದಶಕದಲ್ಲಿಯೂ ಶಾಲೆ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.
ಮಕ್ಕಳು ಕುಟುಂಬಕ್ಕೆ, ಶಾಲೆಗೆ, ಸಮಾಜಕ್ಕೆ ಆಸ್ತಿ:
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಲಾರೆನ್ಸ್ ಮಾಸ್ಕರೇನಸ್ ಮಾತನಾಡಿ 10 ವರ್ಷದ ಹಿಂದೆ ಆಗಿನ ಸಂಚಾಲಕರಾಗಿದ್ದ ಅಲ್ಫ್ರೆಡ್ ಜೆ. ಪಿಂಟೋರವರು ಈ ಶಾಲೆಯನ್ನು ಸ್ಥಾಪಿಸಿದರು. ಇವರು ಹಲವು ಕಡೆ ಶಾಲೆ ಸ್ಥಾಪಿಸಿದ್ದಾರೆ. ಈ ಮೂಲಕ ಶಿಕ್ಷಣಕ್ಕೆ ಆದ್ಯತೆ ಕೊಟ್ಟಿದ್ದಾರೆ ಎಂದರು. ಮಕ್ಕಳು ದೇವರ ಕಾಣಿಕೆ. ನೀವು ಕುಟುಂಬಕ್ಕೆ, ಶಾಲೆಗೆ, ಸಮಾಜಕ್ಕೆ ಆಸ್ತಿ. ನೀವು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಒಳ್ಳೆಯ ಭವಿಷ್ಯವನ್ನು ಪಡೆಯಿರಿ. ಪೋಷಕರು ಈ ಶಾಲೆಯ ಬೆನ್ನೆಲುಬು ಎಂದು ಹೇಳಿ ದೇವರ ಆಶೀರ್ವಾದ ನಮ್ಮ ಮೇಲಿರಲಿ ಎಂದರು.

ಹಲವು ದಶಕಗಳನ್ನು ಕಾಣುವ ಭಾಗ್ಯ ಶಾಲೆಗೆ ಸಿಗಲಿ:
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಉಪಾಧ್ಯಕ್ಷರಾದ ಮೊ|ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಮಾತನಾಡಿ ಈ ಶಾಲೆಯಲ್ಲಿ ಹತ್ತು ವರ್ಷಗಳ ಅಭಿವೃದ್ಧಿ ಗೊತ್ತಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿಯೂ ಶಾಲೆ ಮುಂದೆ ಇದೆ. ಇಂದಿನ ಕಾಲದ ಅಗತ್ಯತೆಯಾದ ಪ್ರಕೃತಿಯ ರಕ್ಷಣೆಯ ಬಗ್ಗೆಯೂ ಚಟುವಟಿಕೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಇನ್ನು ಉತ್ತಮವಾಗಿ ಈ ಶಾಲೆ ಮುಂದುವರಿಯಲಿ. ಹಲವು ದಶಕಗಳನ್ನು ಕಾಣುವ ಭಾಗ್ಯ ಶಾಲೆಗೆ ಸಿಗಲಿ ಎಂದರು
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಸ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಮುಖೇಶ್ ಕೆಮ್ಮಿಂಜೆ, ವಿದ್ಯಾರ್ಥಿ ನಾಯಕ ಅಬ್ದುಲ್ ಮನಾಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸನ್ಮಾನ : ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಉಪಾಧ್ಯಕ್ಷರುಗಳಾದ ಶಾಮ್ಜಿತ್ ರೈ, ಜಗದೀಶ್, ಪ್ರಕಾಶ್ ಡಿಸೋಜ, ವಿವೇಕ್ ಆಳ್ವ, ಗುರುರಾಜ್, ಹಾಲಿ ಉಪಾಧ್ಯಕ್ಷ ಮುಖೇಶ್ರವರಿಗೆ ಸಂಸ್ಥೆಯ ಪರವಾಗಿ ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಶಾಲಾ ವಾರ್ಷಿಕೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಅಭಿನಂದಿಸಲಾಯಿತು. ಶಾಲೆ ಆರಂಭವಾಗಿ ಯಶಸ್ವಿ 10 ವರ್ಷ ಪೂರೈಸಿದ ನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಸ್ 2025-26ನೇ ಸಾಲಿನ ವರದಿ ವಾಚಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಭಾಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ನೃತ್ಯದ ಮೂಲಕ ಆತಿಥಿಗಳನ್ನು ಸ್ವಾಗತಿಸಲಾಯಿತು. ಶಿಕ್ಷಕಿಯರಾದ ಸರಿತಾ ಸ್ವಾಗತಿಸಿ ಮರಿಯಾ ವಂದಿಸಿದರು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅನ್ವಿತಾ, ಜಾಸ್ಮಿನ್, ಲವೀನಾ, ಸುನೀತಾ, ರೇಷ್ಮಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರು ಸಹಕರಿಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಂ|ಮ್ಯಾಕ್ಸಿಮ್ ಡಿಸೋಜ, ಮಾಯ್ ದೆ ದೇವುಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಹ್ಯಾರಿ ಡಿಸೋಜ, ಹಾಗೂ ಧರ್ಮಭಗಿನಿಯರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸ್ಥಾಪಕರಾದ ವಂ|ಆಲ್ಫ್ರೆಡ್ ಜೆ. ಪಿಂಟೋ, ವಂ| ಸ್ಟ್ಯಾನಿ ಪಿಂಟೋರವರಿಗೆ ಸನ್ಮಾನ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿಂದಿನ ಸಂಚಾಲಕರು ಹಾಗೂ ಶಾಲಾ ಸ್ಥಾಪಕರಾದ ಕಟೀಲು ಸಂತ ಜಾಕೋಬ್ ಚರ್ಚ್ನ ಧರ್ಮಗುರು ವಂ|ಆಲ್ಫ್ರೆಡ್ ಜೆ. ಪಿಂಟೋ ಹಾಗೂ ಮುಕ್ಕ ಹೋಲಿ ಸ್ಪಿರಿಟ್ ಚರ್ಚ್ನ ಧರ್ಮಗುರು ವಂ| ಸ್ಟ್ಯಾನಿ ಪಿಂಟೋರವರಿಗೆ ಸಂಸ್ಥೆಯ ಪರವಾಗಿ ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.








