ಅಧ್ಯಕ್ಷ: ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ: ಸುನೀತಾ ಶೆಟ್ಟಿ, ಕೋಶಾಧಿಕಾರಿ: ರಾಮಕೃಷ್ಣ ಮುಡಾಲ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು, ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂಬ್ರ, ಶೇಖಮಲೆ,ಒಳಮೊಗ್ರು, ತ್ಯಾಗರಾಜ, ಕೆಂದಂಬಾಡಿ, ಕುರಿಯ,ಅರ್ಯಾಪು, ಸಂಟ್ಯಾರ್ ಕುಂಬ್ರ ವಲಯ, ಶ್ರೀ ರಾಮ ಭಜನಾ ಮಂದಿರ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬ್ರ, ಶ್ರೀರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ, ಸ್ಪಂದನ ಸೇವಾ ಬಳಗ ಕುಂಬ್ರ ಹಾಗೂ ಸ್ನೇಹ ಯುವಕ ಮತ್ತು ಯುವತಿ ಮಂಡಳ ಪರ್ಪುಂಜ ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ವರ ಪೂಜೆ ಮತ್ತು ಧಾರ್ಮಿಕ ಸಭೆಯು ಜ. 10 ರಂದು ಕುಂಬ್ರ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿಯಾಗಿ ಯೋಜನೆಯ ಮೇಲ್ವಿಚಾರಕರಾದ ಸುನೀತಾ ಶೆಟ್ಟಿರವರುಗಳನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಗೌರವ ಸಲಹೆಗಾರರುಗಳಾಗಿ ಪ್ರಕಾಶ್ಚಂದ್ರ ರೈ ಕೈಕಾರ , ಸುಧಾಕರ್ ರೈ ಕುಂಬ್ರ, ರಘುನಾಥ ರೈ ಮಠ, ಸೀತಾರಾಮ ಗೌಡ ಇದ್ಯಪ್ಪೆ, ಯಶೋಧರ ಚೌಟ, ಮುಖ್ಯ ಸಲಹೆಗಾರರಾಗಿ ಯೋಜನಾಧಿಕಾರಿ ಶಶಿಧರ ಎಮ್, ಉಪಾಧ್ಯಕ್ಷರಾಗಿ ಸುನಂದ ಬಳ್ಳಾಲ್ ಕೆದಂಬಾಡಿ ಬೀಡು, ಚಂದ್ರಾವತಿ ರೈ ಚಾವಡಿ, ಅರುಣ್ ರೈ ಬಿಜಳ, ಸುಷ್ಮಾ ಸತೀಶ್ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ಚಂದ್ರ ಇದ್ಪಾಡಿ, ಅಂಬಿಕಾ ರಮೇಶ್, ಕೋಶಾಧಿಕಾರಿಯಾಗಿ ರಾಮಕೃಷ್ಣ ಮುಡಾಲರವರುಗಳನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ರತನ್ ರೈ ಕುಂಬ್ರ, ಹರೀಶ್ ರೈ ಮುಗೇರು, ಗೋವಿಂದ ಮುಣಿಯಾಣಿ ಶೇಖಮಲೆ, ಗೋವಿಂದ ನಾಯ್ಕ ಪರ್ಪುಂಜ, ಸಂದೀಪ್ ಆರ್ಯಾಪು, ಪ್ರೇಮ ಕುರಿಯ,ರೇಖಾ ರೈ ಸೊರಕೆ, ಆಶಾ ರೈ ಕುಂಬ್ರ, ರೇಖಾ ಪರ್ಪುಂಜ, ಸುರೇಶ್ ನಾಯಕ್ ಪರ್ಪುಂಜ,ದಾಮೋಧರ ರೈ ಶೇಖಮಲೆ, ರಾಜೀವಿ ಕುಂಬ್ರ,ವಿನೋದ ಮಗಿರೆ,ಚೈತ್ರಿಕ ಆರ್ಯಾಪು, ಪ್ರಜ್ಞಾ ತಿಂಗಳಾಡಿ, ಶಾರದ ದರ್ಬೆತ್ತಡ್ಕ, ಜ್ಞಾನೇಶ್ ಸಂಪ್ಯ, ಅಂಕಿತ ಪರ್ಪುಂಜ, ತುಳಸಿ ಕೊಲತ್ತಡ್ಕ, ಹರಿಣಿ ರೈ ಮೇರ್ಲ, ಪುಷ್ಪಲತಾ ಬಳ್ಳಾಲ್ ಅಮೈ, ರೇವತಿ ರೈ ಕುಂಬ್ರರವರುಗಳನ್ನು ಆಯ್ಕೆ ಮಾಡಲಾಯಿತು.
ಜ.10 ರಂದು ಶ್ರೀ ಶನೈಶ್ಚರ ಪೂಜೆ
ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಜ.10 ರಂದು ಶ್ರೀ ಶನೈಶ್ಚರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
