




ಸವಣೂರು: ನೇತ್ರಾವತಿ ತುಳುಕೂಟ ರಾಮಕುಂಜ ಇದರ ನೇತೃತ್ವದಲ್ಲಿ , ತೆಗ್ರ್ ತುಳುಕೂಟ ನೂಜಿಬಾಳ್ತಿಲ ಇದರ ಆಶ್ರಯದಲ್ಲಿ ಕಡಬ ಕುಟ್ರುಪ್ಪಾಡಿ ಕೇಪು ಶ್ರೀಮಹಾಗಣಪತಿ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಡಿ.21ರಂದು ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಅಂಗವಾಗಿ ಕಡಬ ತಾಲೂಕು ಮಟ್ಟದ ತುಳು ಗೊಬ್ಬುಲೆ ಪಂತೋ (ಲಗೋರಿ, ನೋಂಡಿ ಸ್ಪರ್ಧೆ) ಬೊಳ್ಳಿಬೊಲ್ಪು ತುಳು ಕೂಟ ಸವಣೂರು ಇದರ ನೇತೃತ್ವದಲ್ಲಿ ಸವಣೂರು ಯುವಕ ಮಂಡಲದ ಸಹಯೋಗದೊಂದಿಗೆ ಸವಣೂರು ಸ.ಪ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.




ಕಾರ್ಯಕ್ರಮದ ಉದ್ಘಾಟಿಸಿದ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ,ತುಳುವಿನ ಆಚಾರ ವಿಚಾರಗಳನ್ನು ವಿವರಿಸುತ್ತಾ, ತುಳುವರಾದ ನಾವು ತುಳು ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಬೇಕು.ನಮ್ಮ ನೆಲದ ಕ್ರೀಡೆಗಳನ್ನು ಬೆಳೆಸಲು ಹಾಗೂ ಮುಂದಿನ ಪೀಳಿಗೆಗೆ ತಿಳಿಯಲು ತುಳು ಜಾನಪದ ಕ್ರೀಡೆಗಳು ಪೂರಕ ಎಂದರು.





ಕ್ರೀಡಾಂಗಣ ಉದ್ಘಾಟಿಸಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ,ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ತುಳು ಸಮ್ಮೇಳನ ,ಕ್ರೀಡಾಕೂಟಗಳು ಪ್ರೇರಣಾದಾಯಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೊಳ್ಳಿಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಹಾಗೂ ಕಡಬ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಗಿರಿಶಂಕರ ಸುಲಾಯ ಮಾತನಾಡಿ, ಕುಟ್ರುಪ್ಪಾಡಿಯಲ್ಲಿ ನಡೆಯುವ ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಕೈಜೋಡಿಸಬೇಕು.ತುಳು ಭಾಷೆಯಲ್ಲಿರುವ ಸೊಗಡು, ಜನಪದ ಕಲೆಗಳು ನಮ್ಮಲ್ಲಿ ಆತ್ಮೀಯತೆ, ಬಾಂಧವ್ಯ ಸಹಕಾರ ಮನೋಭಾವನೆಯನ್ನು ಮೂಡಿಸುತ್ತದೆ ಎಂದರು.
ಗಿರಿಶಂಕರ ಸುಲಾಯ ಅವರಿಗೆ ಮಿತ್ರಬಳಗದಿಂದ ಸನ್ಮಾನ
ಕಾರ್ಯಕ್ರಮದಲ್ಲಿ ಸವಣೂರಿನಲ್ಲಿ ನಡೆದ ಕಡಬ ,ಪುತ್ತೂರು ತಾಲೂಕು ಮಟ್ಟದ ಗ್ರಾ.ಪಂ.ಪ್ರತಿನಿಧಿಗಳ ಕ್ರೀಡಾಕೂಟ -ಬೊಲ್ಪು- ಇದನ್ನು ಯಶಸ್ವಿ ಸಂಘಟಿಸಿದ ಹಾಗೂ ಸವಣೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಗಿರಿಶಂಕರ ಸುಲಾಯ ಅವರನ್ನು ಈ ಸಂದರ್ಭದಲ್ಲಿ ಮಿತ್ರ ಬಳಗ ಸವಣೂರು ಇದರ ವತಿಯಿಂದ ಸಚಿನ್ ಸವಣೂರು,ದುರ್ಗಾಪ್ರಸಾದ್ ಕಲ್ಪತರು ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ,ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಸದಸ್ಯರಾದ ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ.,ಬಾಬು ಎನ್.,ಚೇತನಾ ಪಾಲ್ತಾಡಿ,ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ತಾರಾನಾಥ ಸವಣೂರು ,ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಸಚಿನ್ ಭಂಡಾರಿ ಸವಣೂರು, ಗಂಗಾಧರ ಸುಣ್ಣಾಜೆ,ದಯಾನಂದ ಮೆದು,ಮಾಜಿ ಕಾರ್ಯದರ್ಶಿಗಳಾದ ಸತೀಶ್ ಬಲ್ಯಾಯ, ಕೀರ್ತನ್ ಕೋಡಿಬೈಲು, ಸದಸ್ಯರಾದ ತೇಜಸ್ ಬೇರಿಕೆ, ಪ್ರದೀಪ್ ನೆಕ್ಕರೆ,ದಿನೇಶ್ ಆಚಾರ್ಯ,ಬಾಲಚಂದ್ರ ರೈ ಕೆರೆಕ್ಕೋಡಿ,ದುರ್ಗಾಪ್ರಸಾದ್ ಕಲ್ಪತರು,ಶಿವಾನಂದ ಗೌಡ ಪಾಲ್ತಾಡಿ,ಸವಣೂರು ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ಬಿ., ಜಯಾ ಕೆ.,ಜಯಶ್ರೀ, ಶಾರದಾ ಎಂ.ಮೊದಲಾದವರಿದ್ದರು.
ಫಲಿತಾಂಶ
ಲಗೋರಿ- ಪುರುಷರ ವಿಭಾಗ
ಪ್ರಾಥಮಿಕ ಶಾಲಾ ವಿಭಾಗ
ಪ್ರಥಮ- ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆ ( ತನ್ವಿತ್ ಮತ್ತು ತಂಡ)
ದ್ವಿತೀಯ- ಸವಣೂರು ಹಿ.ಪ್ರಾ. ಶಾಲೆ ( ಸಾಹಿಲ್ ಮತ್ತು ತಂಡ)
ಪ್ರೌಢಶಾಲಾ ವಿಭಾಗ
ಪ್ರಥಮ- ಸವಣೂರು ಪ್ರೌಢಶಾಲೆ ( ಚಿತ್ರಾಕ್ಷ ಮತ್ತು ತಂಡ)
ದ್ವಿತೀಯ- ಸವಣೂರು ಪ್ರೌಢಶಾಲೆ ( ಸಾಗರ್ ಮತ್ತು ತಂಡ)
ಕಾಲೇಜು ವಿಭಾಗ
ಪ್ರಥಮ- ಪಾಲ್ತಾಡಿ ಜವನೆರ್ (ಲಿಖಿತ್ ಮತ್ತು ತಂಡ)
ದ್ವಿತೀಯ- ಸವಣೂರು ಯುವಕ ಮಂಡಲ (ತೇಜಸ್ ಮತ್ತು ತಂಡ)
ಸಾರ್ವಜನಿಕ ವಿಭಾಗ
ಪ್ರಥಮ- ಸವಣೂರು ಯುವಕ ಮಂಡಲ (ತೇಜಸ್ ಮತ್ತು ತಂಡ)
ದ್ವಿತೀಯ- ಯುನೈಟೆಡ್ ಈಗಲ್ಸ್ ಪದವು (ಭರತ್ ಮತ್ತು ತಂಡ)
ಲಗೋರಿ- ಮಹಿಳಾ ವಿಭಾಗ
ಪ್ರಾಥಮಿಕ ಶಾಲಾ ವಿಭಾಗ
ಪ್ರಥಮ- ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆ (ಯಶ್ವಿ ಮತ್ತು ತಂಡ)
ದ್ವಿತೀಯ- ಸವಣೂರು ಮೊಗರು ಹಿ.ಪ್ರಾ. ಶಾಲೆ (ಅಲ್ಫಾ ಮತ್ತು ತಂಡ)
ಪ್ರೌಢಶಾಲಾ ವಿಭಾಗ
ಪ್ರಥಮ- ಸವಣೂರು ಪ್ರೌಢಶಾಲೆ ( ಸಿಂಚನಾ ಮತ್ತು ತಂಡ)
ದ್ವಿತೀಯ- ಸವಣೂರು ಪ್ರೌಢಶಾಲೆ ( ನಿತ್ಯಾ ಮತ್ತು ತಂಡ)
ಕಾಲೇಜು ವಿಭಾಗ
ಪ್ರಥಮ- ಸರಕಾರಿ ಪದವಿಪೂರ್ವ ಕಾಲೇಜು ಸವಣೂರು (ಮೋಕ್ಷಾ ಮತ್ತು ತಂಡ)
ದ್ವಿತೀಯ- ಸರಕಾರಿ ಪದವಿಪೂರ್ವ ಕಾಲೇಜು ಸವಣೂರು (ಪೂಜಾ ಮತ್ತು ತಂಡ)
ಸಾರ್ವಜನಿಕ ವಿಭಾಗ
ಪ್ರಥಮ- ಗ್ರಾಮ ಪಂಚಾಯತ್ ಸವಣೂರು (ಶಾರದಾ ಮತ್ತು ತಂಡ)
ದ್ವಿತೀಯ- ಪದ್ಮಶ್ರೀ ಮಹಿಳಾ ಮಂಡಲ ಸವಣೂರು (ಜಯಾ ಕೆ ಮತ್ತು ತಂಡ)
ನೋಂಡಿ ಪುರುಷರ ವಿಭಾಗ
ಪ್ರಾಥಮಿಕ ಶಾಲಾ ವಿಭಾಗ
ಪ್ರಥಮ- ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆ ( ತನ್ವಿತ್ ಮತ್ತು ತಂಡ)
ದ್ವಿತೀಯ- ಸವಣೂರು ಹಿ.ಪ್ರಾ. ಶಾಲೆ ( ಸಾಹಿಲ್ ಮತ್ತು ತಂಡ)
ಪ್ರೌಢಶಾಲಾ ವಿಭಾಗ
ಪ್ರಥಮ- ಸವಣೂರು ಪ್ರೌಢಶಾಲೆ ( ದಿಗಂತ್ ಮತ್ತು ತಂಡ)
ದ್ವಿತೀಯ- ಸವಣೂರು ಪ್ರೌಢಶಾಲೆ ( ಸಾಗರ್ ಮತ್ತು ತಂಡ)
ಕಾಲೇಜು ವಿಭಾಗ
ಪ್ರಥಮ- ಸವಣೂರು ಯುವಕ ಮಂಡಲ (ತೇಜಸ್ ಮತ್ತು ತಂಡ)
ದ್ವಿತೀಯ-ಪಾಲ್ತಾಡಿ ಜವನೆರ್ (ಲಿಖಿತ್ ಮತ್ತು ತಂಡ)
ಸಾರ್ವಜನಿಕ ವಿಭಾಗ
ಪ್ರಥಮ- ಬೊಳ್ಳಿಬೊಲ್ಪು ತುಳುಕೂಟ ಸವಣೂರು ( ತಾರಾನಾಥ ಮತ್ತು ತಂಡ)
ದ್ವಿತೀಯ- ಯುನೈಟೆಡ್ ಈಗಲ್ಸ್ ಪದವು (ದೀಪಾಕ್ಷ ಮತ್ತು ತಂಡ)
ನೋಂಡಿ- ಮಹಿಳಾ ವಿಭಾಗ
ಪ್ರಾಥಮಿಕ ಶಾಲಾ ವಿಭಾಗ
ಪ್ರಥಮ – ಸವಣೂರು ಮೊಗರು ಹಿ.ಪ್ರಾ. ಶಾಲೆ (ಅಲ್ಫಾ ಮತ್ತು ತಂಡ)
ದ್ವಿತೀಯ- ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆ (ಯಶ್ವಿ ಮತ್ತು ತಂಡ)
ಪ್ರೌಢಶಾಲಾ ವಿಭಾಗ
ಪ್ರಥಮ- ಸವಣೂರು ಪ್ರೌಢಶಾಲೆ (ದಕ್ಷಾ ಮತ್ತು ತಂಡ)
ದ್ವಿತೀಯ- ಸವಣೂರು ಪ್ರೌಢಶಾಲೆ (ಸಿಂಚನಾ ಮತ್ತು ತಂಡ)
ಕಾಲೇಜು ವಿಭಾಗ
ಪ್ರಥಮ- ಸರಕಾರಿ ಪದವಿಪೂರ್ವ ಕಾಲೇಜು ಸವಣೂರು (ದೀಪ್ತಿ ಮತ್ತು ತಂಡ)
ದ್ವಿತೀಯ- ಸರಕಾರಿ ಪದವಿಪೂರ್ವ ಕಾಲೇಜು ಸವಣೂರು (ಪ್ರಣ್ಯ ಮತ್ತು ತಂಡ)
ಸಾರ್ವಜನಿಕ ವಿಭಾಗ
ಪ್ರಥಮ- ಗ್ರಾಮ ಪಂಚಾಯತ್ ಸವಣೂರು (ಶಾರದಾ ಮತ್ತು ತಂಡ)
ದ್ವಿತೀಯ- ಪದ್ಮಶ್ರೀ ಮಹಿಳಾ ಮಂಡಲ ಸವಣೂರು (ಜಯಾ ಕೆ ಮತ್ತು ತಂಡ)







