




ಪುತ್ತೂರು: ಅಶ್ರಫ್ ‘ಹೆಸರಿನ ವ್ಯಕ್ತಿಗಳ ಕರ್ನಾಟಕ ಒಕ್ಕೂಟದ ಸಭೆ ಡಿ.14ರಂದು ಅಶ್ರಫ್ ಕಲ್ಲೇಗ ಅವರ ನೇತೃತದಲ್ಲಿ ಸಂಟ್ಯಾರ್ ಗೋಲ್ಡನ್ ಗೇಟ್ ಹಾಲ್ ನಲ್ಲಿ ನಡೆಯಿತು.



ಸಭೆಯನ್ನು ಅಶ್ರಫ್ ಬಾಖವಿ ಚಾಪಲ್ಲ ಅವರು ದುಆಃ ಮೂಲಕ ನೆರವೇರಿಸಿ, ಅಶ್ರಫ್ ಎಂಬ ಹೆಸರಿನ ಮಹತ್ವ ಮತ್ತು ಅತ್ಯಂತ ಉನ್ನತೀಯನು ಎಂಬ ಅದರ ಅರ್ಥದ ಬಗ್ಗೆ ವಿವರಿಸಿ, ಇಬಾದತ್ತಿಗೆ ಇಸ್ಲಾಂ ಪ್ರಾಧಾನ್ಯತೆ ನೀಡುವಂತೆ ಸಮಾಜ ಸೇವೆಗೂ ಇಸ್ಲಾಂ ಮಹತ್ವವನ್ನು ನೀಡುತ್ತದೆ. ಆದ್ದರಿಂದ ಈ ಸಂಘಟನೆಯು ಸಮಾಜಸೇವೆಗೆ ಹೆಚ್ಚಿನ ಒತ್ತು ನೀಡುವಂತಾಗಲಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.






ಮುಖ್ಯ ಅತಿಥಿ ಯಾಗಿದ್ದ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ‘ ಅಶ್ರಫ್ ‘ ನಾಮಾಂಕಿತ ಜಿಲ್ಲಾವಾರು ವ್ಯಕ್ತಿಗಳನ್ನು ಹುಡುಕಿ ಒಕ್ಕೂಟದಲ್ಲಿ ಸೇರ್ಪಡಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಿ ಸಮಾಜಕ್ಕೆ ಪೂರಕ ಸಹಾಯವಾಗುವ ಕಾರ್ಯ ಯೋಜನೆ ರೂಪೀಕರಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಕೇರಳ ರಾಜ್ಯ ಅಶ್ರಫ್ ಒಕ್ಕೂಟದ ಮುಖ್ಯಸ್ಥರಾದ ಅಶ್ರಫ್ ಕುಂಞಪ್ಪ, ಅಶ್ರಫ್ ಸೆಂಚುರಿ ಮಂಜೇರಿ ಮಂಡಲ, ಮತ್ತು ಎಮ್ ಕೆ ಎಮ್ ಅಶ್ರಫ್ ಕರ್ನೂರು ಮತ್ತು ಕರ್ನಾಟಕದ ಅಶ್ರಫ್ ಆಲಿ, ಸೋಮಾವಾರ ಪೇಟೆ ಕೊಡಗು, ಅಶ್ರಫ್ ಬಿಳಿಗೆರೆ ಕೊಡಗು. ಅಶ್ರಫ್ ಸಿ. ಎ.ಬಾವ, ಅಶ್ರಫ್ ಸಿಟಿ, ಅಶ್ರಫ್ ಕೊಲ್ಲಮುಡಿ, ಅಶ್ರಫ್ ವಿ. ಏಚ್.ವಿಟ್ಲ, ಅಶ್ರಫ್ ಶೇಡಿ ಗುಂಡಿ, ಅಶ್ರಫ್ ಗುಂಡಿ ಸುಳ್ಯ, ಅಶ್ರಫ್ ಮಾಂಚಿ, ಅಶ್ರಫ್ ಕೌನ್ಸಿಲರ್ ವಿಟ್ಲ, ಅಶ್ರಫ್ ಸಿ. ಎಮ್ ಉಳ್ಳಾಲ, ಅಶ್ರಫ್ ಮಾಸ್ಟರ್, ಅಶ್ರಫ್ ಎಟಿಎಂ, ಅಶ್ರಫ್ ಕಲಂಬಿ, ಮೊಹಮ್ಮದ್ ಹನೀಫ್. ಯು ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಅಶ್ರಫ್ ಆಗ್ನಾಡಿ ವಕೀಲರು ಕಾರ್ಯಕ್ರಮ ನಿರೂಪಿಸಿದರು.
ಅಶ್ರಫ್ ಕರ್ನಾಟಕ ಒಕ್ಕೂಟ, ಎಂಬುದು ಕರ್ನಾಟಕ ರಾಜ್ಯದ ಅಶ್ರಫ್ ನಾಮಾಂಕಿತ ವ್ಯಕ್ತಿಗಳ ಒಟ್ಟು ಸೇರುವಿಕೆ ಮತ್ತು ಸೇವಾ ಉದ್ದೇಶ ಹೊಂದಿದ್ದು, ನೆರೆರಾಜ್ಯ ಕೇರಳದಲ್ಲಿ ಅಶ್ರಫ್ ಕೂಟಾಯಿಮಾ ಎಂಬ ಹೆಸರಲ್ಲಿ ಹಿಂದಿನ ವರ್ಷಗಳಲ್ಲಿ ಸಮಾವೇಶ ನಡೆಸಿ ಯಶಸ್ವಿ ಪ್ರಯೋಗ ನಡೆಸಿದ್ದು ಇಲ್ಲಿ ಗಮನಾರ್ಹ ಎಂದು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪ ವಾಗಿದೆ.





