ಅರಂತೋಡಿನಲ್ಲಿ ಬಸ್‌ ಅಪಘಾತದಿಂದ ಮೃತಪಟ್ಟ ಮಹಿಳೆಯ ಪುತ್ರಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ರೂ. 10ಲಕ್ಷ ಪರಿಹಾರ

0

ಪುತ್ತೂರು: 6 ತಿಂಗಳ ಹಿಂದೆ ಅರಂತೋಡಿನ ಕೋಡಂಕೇರಿ ಎಂಬಲ್ಲಿ ನಡೆದ ಕೆಎಸ್‌ಆರ್‌ಟಿಸಿ ಬಸ್‌ಗಳ ಮಧ್ಯೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ವಾರಿಸುದಾರೆ ಪುತ್ರಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ರೂ. 10ಲಕ್ಷ ಪರಿಹಾರವನ್ನು ವಿತರಿಸಲಾಯಿತು.


ಜೂ.25 ರಂದು ಪುತ್ತೂರು ವಿಭಾಗದ ಮಡಿಕೇರಿ ಘಟಕದ ವಾಹನ ಕೆಎ 21 ಎಫ್ 0069 ಬಸ್ ಮತ್ತು ಮಂಗಳೂರು ವಿಭಾಗದ ಮಂಗಳೂರು 03ನೇ ಘಟಕದ ಬಸ್ ಕೆ.ಎ.19 ಎಫ್ 3820ರ ನಡುವೆ ಅರಂತೋಡಿನ ಕೋಡಂಕೇರಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಮಡಿಕೇರಿ ಘಟಕದ ಬಸ್‌ನಲ್ಲಿ ಒಟ್ಟು 26 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರು ತೀವ್ರ ಗಾಯಗೊಂಡಿದ್ದರು. ಇದರಲ್ಲಿ ಕೊಡಗು ಕುಶಾಲನಗರದ ಭಾರತಿ(60ವ)ರರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತಪಟ್ಟ ಮನೆಯವರಿಗೆ ಅಪಘಾತ ಪರಿಹಾರವಾಗಿ ಸಂಸ್ಥೆಯ ನಿಯಾಮಾವಳಿಯಂತೆ ಮೃತರ ವಾರಿಸುದಾರೆ ಪುತ್ರಿ ಕುಮದಿನಿ ಕೆ.ಎಲ್ ಅವರಿಗೆ ಸಂಸ್ಥೆಯಿಂದ ರೂ. 10ಲಕ್ಷ ಪರಿಹಾರವನ್ನು ನೀಡಲಾಯಿತು.

ಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬ ಅವರು ವಾರಿಸುದಾರೆಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಸಹಾಯಕ ಸಂಚಾರ ಅಧೀಕ್ಷಕಿ ವಿಜಯಲಕ್ಷ್ಮೀ ಪಿ.ಸಿ, ಮೇಲ್ವಿಚಾರಕ ನಿರಂಜನ ಕೃಷ್ಣ, ಸಹಾಯಕ ಸಂಚಾರ ಶಾಖೆಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here