ಭಕ್ತಕೋಡಿ: ಅನಧಿಕೃತ ಕಟ್ಟೆ ತೆರವು -ಪ್ರಕರಣ ದಾಖಲು

0

ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡು ಪಾಲು ಬಿದ್ದ ಕಟ್ಟೆಯೊಳಗೆ ಕೆಲವರು ಧ್ವಜ ಹಾಗೂ ತೋರಣ ಕಟ್ಟಿ ವಿವಾದ ಸೃಷ್ಟಿಸಲು ಯತ್ನಿಸಿದ ಆರೋಪ ವ್ಯಕ್ತವಾಗಿ, ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಧ್ವಜವನ್ನು ತೆರವುಗೊಳಿಸಿ ಕಟ್ಟೆಯನ್ನು ನೆಲಸಮಗೊಳಿಸಿದ ಘಟನೆ ಡಿ.17ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಅಧೀಕೃತ ಪರವಾನಿಗೆಯನ್ನು ಪಡೆಯದೆ, ಅನಧಿಕೃತವಾಗಿ ಸಾರ್ವಜನಿಕರಿಗೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಂಭವವಿರುವಂತೆ, ಕಟ್ಟೆ ನಿರ್ಮಾಣ ಮಾಡಿದವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂ: 147-2025, ಕಲಂ:- 270 ಬಿಎನ್‌ ಎಸ್‌ 2023 ಮತ್ತು ಕಲಂ 3 KARNATAKA OPEN PLACE DISFIGUREMENT ACT 1951 & 1981 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here