






ಮರ್ದಾಳ: ಕಡಬ ತಾಲೂಕಿನ ಬಂಟ್ರ ಗ್ರಾಮದ ಕಾಯಂದೂರು ನಿವಾಸಿ, ಉಜಿರೆ ಎಸ್ಡಿಎಂ ಕಾಲೇಜಿನ ಪ್ರಥಮ ಬಿ.ಕಾಂ.ವಿದ್ಯಾರ್ಥಿನಿ ಶ್ರೇಯಾ ಗೌಡ ಅವರು ರಾಷ್ಟ್ರಮಟ್ಟದ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಡಿ.25ರಂದು ಜೂನಿಯನ್ ನ್ಯಾಷನಲ್ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಶ್ರೇಯಾ ಗೌಡ ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಬಂಟ್ರ ಗ್ರಾಮದ ಕಾಯಂದೂರು ನಿವಾಸಿ ರಮೇಶ್ ಗೌಡ ಪಿ.ಹಾಗೂ ಯಶೋಧ ರಮೇಶ್ ದಂಪತಿ ಪುತ್ರಿ. ಕಡಬ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಹಳೆವಿದ್ಯಾರ್ಥಿನಿಯಾಗಿದ್ದಾರೆ.












