







ಅಧ್ಯಕ್ಷ; ಸುಧಾಕರ್ ಸುವರ್ಣ, ಪ್ರಧಾನ ಕಾರ್ಯದರ್ಶಿ; ಶೇಷಪ್ಪ ಕಜೆಮಾರ್ ,ಉಪಾಧ್ಯಕ್ಷರಾಗಿ ಕರುಣಾಕರ ರೈ ಸಿ.ಹೆಚ್., ಎಂ.ಸರ್ವೇಶ್ ಭಟ್


ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಮುಂದಿನ 3 ವರ್ಷಗಳ ಅವಧಿಗೆ ಎಲ್ಲಾ ಪದಾಽಕಾರಿಗಳ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ.



ನೂತನ ಅಧ್ಯಕ್ಷರಾಗಿ ವಿಜಯಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಸಿ.ಶೇ. ಕಜೆಮಾರ್, ಉಪಾಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಕರುಣಾಕರ ರೈ ಸಿ.ಎಚ್., ಉದಯವಾಣಿ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಎಂ.ಸರ್ವೇಶ್ ಭಟ್, ಕಾರ್ಯದರ್ಶಿಗಳಾಗಿ ನ್ಯೂಸ್ 18 ವರದಿಗಾರ ಅಜಿತ್ ಕುಮಾರ್, ಜಯಕಿರಣ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ನಝೀರ್ ಕೊಯಿಲ, ಕೋಶಾಧಿಕಾರಿಯಾಗಿ ವಾರ್ತಾಭಾರತಿ ಪತ್ರಿಕೆಯ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುದ್ದಿಬಿಡುಗಡೆ ಹಿರಿಯ ವರದಿಗಾರರಾದ ಶೇಖ್ ಜೈನುದ್ದೀನ್, ಲೋಕೇಶ್ ಬನ್ನೂರು, ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಡಿ, ಪ್ರಜಾವಾಣಿ ವರದಿಗಾರ ಶಶಿಧರ ರೈ ಕುತ್ಯಾಳ, ನಮ್ಮ ಟಿವಿ ವರದಿಗಾರ ಕೃಷ್ಣಪ್ರಸಾದ್, ಸ್ಪಂದನ ಟಿವಿ ವರದಿಗಾರ ಉಮಾಶಂಕರ್, ಹೊಸದಿಗಂತ ವರದಿಗಾರ ರಾಜೇಶ್ ಪಟ್ಟೆ ಹಾಗೂ ಬಿಟಿವಿ ವರದಿಗಾರ ಶರತ್ ಆಯ್ಕೆಯಾದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಡಿ.24ರಂದು ಪುತ್ತೂರು ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಜಿಲ್ಲಾ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಸಂಘದಲ್ಲಿ ಒಟ್ಟು 42 ಮಂದಿ ಸದಸ್ಯರಿದ್ದಾರೆ. ಅಧ್ಯಕ್ಷ ಸಹಿತ ಪದಾಧಿಕಾರಿಗಳ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಕಾರ್ಯಕಾರಿಣಿ ಸಮಿತಿಯ 8 ಸ್ಥಾನಕ್ಕೆ 10 ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರ ಸಲ್ಲಿಸಿದವರ ಪೈಕಿ ಪ್ರವೀಣ್ ಕುಮಾರ್ ಬೊಳುವಾರು ಮತ್ತು ಸುಧಾಕರ್ ಪಡೀಲ್ ಅವರು ನಾಮಪತ್ರ ಹಿಂಪಡೆದ ಕಾರಣ ಕಾರ್ಯಕಾರಿಣಿ ಸಮಿತಿಗೂ ಅವಿರೋಧ ಆಯ್ಕೆಯಾಯಿತು.
ಪ್ರಮಾಣಪತ್ರ ವಿತರಣೆ;
ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು. ನಿರ್ಗಮನ ಅಧ್ಯಕ್ಷ ಸಿದ್ದೀಕ್ ನೀರಾಜೆ ಮತ್ತು ನಿರ್ಗಮನ ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ಅಭಿನಂದಿಸಿ ಮಾತನಾಡಿದರು. ಹೊಸ ತಂಡದ ಪರವಾಗಿ ನೂತನ ಅಧ್ಯಕ್ಷ ಸುಧಾಕರ ಸುವರ್ಣ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಅವರು ಎಲ್ಲ ಮತದಾರ ಸದಸ್ಯರಿಗೆ ಮತ್ತು ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.










